ಉಡುಪಿ ಜ 21 : ನೈಟ್ ಲೈಟ್ ಫಿಶಿಂಗ್ ನಡೆಸುವ ಬೋಟ್ಗಳನ್ನು ವಶಪಡಿಸುವಂತೆ ಒತ್ತಾಯಿಸಿ, ನಾಡ ದೋಣಿ ಮೀನುಗಾರರು, ಜ 21 ರ ಭಾನುವಾರ ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ಅವರಿಗೆ ಮನವಿ ಸಲ್ಲಿಸಿದ್ರು. ಸಾಕಷ್ಟು ವಿರೋಧದ ನಡುವೆಯೂ ನೈಟ್ ಲೈಟ್ ಪಿಶಿಂಗ್ ಎಗ್ಗಿಲ್ಲದೇ ನಡೆಯುತ್ತಿದೆ. ನೈಟ್ ಲೈಟ್ ಪಿಶಿಂಗ್ನಲ್ಲಿ ಜನರೇಟ್ ಆಳವಡಿಸಿ ಮೀನುಗಾರಿಕೆ ನಡೆಸುವ ಬೋಟ್ಗಳ ಆಕ್ರಮಕ್ಕೆ ಕಡಿವಾಣ ಬೀಳುತ್ತಿಲ್ಲ. ದುರಾದೃಷ್ಟ ಎಂದ್ರೆ ನೈಟ್ ಲೈಟ್ ಫಿಶಿಂಗ್ನಿಂದ ಸಾಂಪ್ರಾದಾಯಿಕ ನಾಡದೋಣಿ ಮೀನುಗಾರರು ಬಲವಾಗಿ ಹೊಡೆತ ಕಂಡುಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಮೀನುಗಾರಿಕೆ ನಡೆಸುವ ನಾಡದೋಣಿ ಮೀನುಗಾರರಿಗೆ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ತಲೆದೋರಿದೆ. ಕಳೆದ ಹಲವು ದಿನಗಳಿಂದ ನಾಡದೋಣಿಯರಿಗೆ ಮೀನು ಸಿಗದೇ ಬರೀ ಕೈಯಲ್ಲಿ ವಾಪಸ್ಸಾಗುವ ಸನ್ನಿವೇಶ ಸೃಷ್ಟಿಯಾಗಿದ್ದು ನಾಡದೋಣಿ ಮೀನುಗಾರರು ಹತಾಶರಗಿದ್ದಾರೆ. ಮತ್ಸ್ಯ ಕ್ಷಾಮ ನಾಡದೋಣಿ ಮೀನುಗಾರರನ್ನು ಅತಂತ್ರ ಪರಿಸ್ಥಿತಿಗೆ ತಲುಪಿಸಿದ್ದೂ ಜೀವನ ಸಾಗಿಸಲು ಕಷ್ಟದಾಯಕವಾಗುತ್ತಿದೆ. ಇದಲ್ಲದೆ ಕಳೆದ ಹಲವು ದಿನಗಳಿಂದ ಮಲ್ಪೆಯ ಮೀನುಗಾರರು ಕೂಡಾ ನೈಟ್ ಲೈಟ್ ಫಿಶಿಂಗ್ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನೈಟ್ ಲೈಟ್ ಫಿಶಿಂಗ್ ನಿಷೇಧಿಸಬೇಕೆಂದು ಮೀನುಗಾರರು ಮನವಿ ಮಾಡಿದರು.