ಕಾರ್ಕಳ, ಡಿ 22 (DaijiworldNews/SM): ಇಲ್ಲಿನ ಬೆಳ್ಮಣ್ನ ಬೃಂದಾವನ ಮನೆಯಲ್ಲಿ ನಿಗೂಢ ರೀತಿಯಲ್ಲಿ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಗೈದು ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿ ಹಾಳೆಕಟ್ಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿ ಎಸೆದಿರುವ ಮಾಹಿತಿ ಬೆಳಕಿಗೆ ಬಂದಿದೆ.
ದಿವಂಗತ ಹರಿದಾಸ ಉಡುಪರವರ ಪತ್ನಿ ಬಿ.ಭರತ ಲಕ್ಷ್ಮೀ(೬೮) ಎಂಬವರು ಕೊಲೆಗೀಡಾದವರು. ಡಿಸೆಂಬರ್ ೨೦ರಂದು ಬೆಳಿಗ್ಗೆ ೭ರಿಂದ ರಾತ್ರಿ ೮ರ ಮಧ್ಯಾವಧಿಯಲ್ಲಿ ಇವರು ನಾಪತ್ತೆಯಾಗಿರುವ ಕುರಿತು ಅವರ ಮಗ ಶ್ರೀನಾಥ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಕುರಿತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕರೆಯೊಂದರ ಮೇರೆ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ಹಾಗೂ ತಂಡದವರು ಘಟನಾ ಸ್ಥಳಕ್ಕೆ ತೆರಳಿದಾಗ ಬಾವಿಯಲ್ಲಿ ಪತ್ತೆಯಾಗಿದ್ದ ಶವವು ಬಿ.ಭರತ ಲಕ್ಷ್ಮೀ ಎಂಬವರದಾಗಿತ್ತು ಎಂದು ತಿಳಿದುಬಂದಿದೆ.