ಕಾಸರಗೋಡು, ಡಿ 22 (DaijiworldNews/SM): ಪ್ರತಿಭಟನೆ, ಘರ್ಷಣೆ, ಲಾಠಿಚಾರ್ಜ್, ಕರ್ಫ್ಯೂ ಹೀಗೆ ಹತ್ತು ಹಲವು ಘಟನೆಗಳಿಂದ ನಲುಗಿರುವ ಕಡಲ ನಗರಿಗೆ ಕಾಸರಗೋಡು ಸಂಸದರನ್ನು ಒಳಗೊಂಡ ಕೇರಳದ ಯುಡಿಎಫ್ ನಾಯಕರು ಡಿಸೆಂಬರ್ ೨೩ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಹಾಗೂ ಗೋಲಿಬಾರ್ ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಲಿದ್ದಾರೆ.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಕಣ್ಣೂರು ಸಂಸದ ಕೆ. ಸುಧಾಕರನ್, ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಶಾಸಕರಾದ ಪಾರಕ್ಕಲ್ ಅಬ್ದುಲ್ಲ, ಶಂಸುದ್ದೀನ್ ಸೇರಿದಂತೆ ಆರು ಮಂದಿಯ ನಿಯೋಗ ಮಂಘಳೂರಿಗೆ ಆಗಮಿಸಲಿದೆ. ಬಳಿಕ ಮೃತಪಟ್ಟ ಇಬ್ಬರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ ಮಾತುಕತೆ ನಡೆಸಲಿದ್ದಾರೆ.
ಬೆಳಿಗ್ಗೆ ಹತ್ತು ಗಂಟೆಗೆ ಮಂಗಳೂರು ತಲಪುವ ನಿಯೋಗ ಗೋಲಿಬಾರ್ ನಡೆದ ಸ್ಥಳ, ಮೃತಪಟ್ಟವರ ಮನೆ ಕೇರಳದ ವಿದ್ಯಾರ್ಥಿಗಳು ಸಿಲುಕಿದ ಸ್ಥಳಗಳಿಗೆ ತೆರಳಲಿದ್ದಾರೆ.