ಕಾರ್ಕಳ ಜ 21: ಸರ್ವ ದರ್ಮ ಸಮ್ಮಿಲನದ ಕ್ಷೇತ್ರ ಹಾಗೂ ಪವಾಡ ಕ್ಷೇತ್ರ ಅನಿಸಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ಜ 21 ರ ಭಾನುವಾರ ಬೆಳಿಗ್ಗೆ ಚಾಲನೆ ದೊರೆಯಿತು.
ಬಸಿಲಿಕಾವಾಗಿ ಮಾರ್ಪಡಾಗಿ ಎರಡನೇ ವರ್ಷಕ್ಕೆ ಪಾದರ್ಪಣೆಗೈದ ಈ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನಸ್ತಂಭ ನಿರ್ಮಾಣಗೊಂಡಿದ್ದು, ಬಸಿಲಿಕಾದ ಸಂಕೇತದ ಧ್ವಜಾರೋಹಣವನ್ನು ಲಂಡನ್ ಉದ್ಯಮಿ ರಿಚ್ಚರ್ಡ್ ಕ್ರಿಸ್ಟಿನ್ ಲೋಬೋ ದಂಪತಿಗಳು ನೆರವೇರಿಸಿದರು. ಇದೇ ದಂಪತಿಗಳು ತಮ್ಮ ಉದಾರ ಕೊಡುಗೆಯಾಗಿ ಮಾನಸ್ತಂಭವನ್ನು ಪುಣ್ಯಕ್ಷೇತ್ರ ನೀಡಿದ್ದರು. ಅದರ ಪ್ರಯುಕ್ತ ಬಸಿಲಿಕಾ ನಿರ್ದೇಶಕ ಹಾಗೂ ಧರ್ಮಕೇಂದ್ರಕ್ಕೆ ಪ್ರಧಾನ ಗುರುಗಳಾದ ವಂದನೀಯ ಜಾರ್ಜ್ ಡಿಸೋಜಾ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು. ದೇಶ ವಿದೇಶದಿಂದ ಅಸಂಖ್ಯಾತ ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಿರುವುದು ಕಂಡು ಬಂತು.