ಉಡುಪಿ, ಡಿ 22 (Daijiworld News/PY) : ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಡಿಸಿಐಬಿ ಸಿಬ್ಬಂದಿ ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ ಘಟನೆ ಇಂದು ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಉಲ್ಲಾಸ್ ನಗರ ನಿವಾಸಿ ವಿಂಡೋ ರಾಮ್ಸೇವಕ್ ಯಾದವ್ (36) ಎಂಬಾತ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ, ಡಿಸಿಐಬಿ ಸಿಬ್ಬಂದಿ ದಾಳಿ ನಡೆಸಿದ್ದು, ಸುಮಾರು 10 ಕೆಜಿ ಗಾಂಜಾವನ್ನು ಹಾಗೂ 3,23,300 ರೂ. ಮೌಲ್ಯದ ಸರಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ ಎರಡು ಮೊಬೈಲ್ ಫೋನ್, ನಗದು ಮತ್ತು ಗಾಂಜಾ ಸೇರಿದ್ದು, ಅಪಾರ ಪ್ರಮಾಣದ ಗಾಂಜಾದೊಂದಿಗೆ ಆರೋಪಿಗಳನ್ನು ಬಂಧಿಸಿದ್ದ ತಂಡಕ್ಕೆ ಎಸ್ಪಿ ನಿಶಾ ಜೇಮ್ಸ್ 20,000 ರೂ ನಗದು ಬಹುಮಾನ ಘೋಷಿಸಿದ್ದಾರೆ.
ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಆರೋಪಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ ತಂಡದಲ್ಲಿ ಡಿಸಿಐಬಿ ಎಎಸ್ಐ ರವಿ ಚಂದ್ರ, ಡಿಸಿಐಬಿ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂಡ, ರಾಜ್ಕುಮಾರ್, ದಯಾನಂದ ಪ್ರಭು, ಶಿವಾನಂದ; ಮತ್ತು ಚಾಲಕ ರಾಘವೇಂದ್ರ ಸೇರಿದ್ದರು.