ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಂತರ ತುಳುನಾಡಿನ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಕಾರಣ ಅರ್ಜುನ್ ಇದೀಗ ಕರ್ಣೆ ಎನ್ನೋ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ . ಹಾಗಾಗಿ ಮಹಾಭಾರತದ ಅರ್ಜುನನ ಹಿರಿಯಣ್ಣ ಕರ್ಣನ ಹೆಸರಿನಲ್ಲಿ ಅರ್ಜುನ್ ಕಾಪಿಕಾಡ್ ಬೆಳ್ಳಿತೆರೆಯ ಮೇಲೆ ತಮ್ಮ ಮಿಂಚು ಹರಿಸಲಿದ್ದಾರೆ. ಹಾಗಂತ ಇದೇನು ಪೌರಾಣಿಕ ಪಾತ್ರದ ಕರ್ಣ ನಲ್ಲ . ಅದರೆ ಆ ಕರ್ಣನಿಗೂ ಈ ಕರ್ಣೆಗೂ ಒಂದಿಷ್ಟು ಸಾಮತ್ಯೆಗಳಿವೆ. ಹಾಗಾಗಿ ಅರ್ಜುನ್ ಕಾಪಿಕಾಡ್ ಕರ್ಣೆನಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಬೆಳ್ಳಿತೆರೆಯ ಮೇಲೆ ಅಬ್ಬರಿಸೋದು ಗ್ಯಾರಂಟಿಯಾಗಿದೆ. ಇದು ಅರ್ಜುನ್ ಅವರಿಗೆ ತುಳುವಿನ 10 ನೇ ಚಿತ್ರವಾಗಿದೆ.
ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು. ಇದರಲ್ಲಿ ಖಡಕ್ ಡೈಲಾಗ್ ಮೂಲಕ ಅರ್ಜುನ್ ಗಮನ ಸೆಳೆಯುತ್ತಿದ್ದಾರೆ. ರಕ್ಷಿತ್ ಎಸ್ ಕೋಟ್ಯಾನ್ ಮತ್ತು ರಕ್ಷಿತ್ .ಎಚ್ ಸಾಲ್ಯಾನ್ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರ ಪೆಬ್ರವರಿ ೫ ರಂದು ಸೆಟ್ಟೇರಲಿದೆ. ಚಿತ್ರವೂ ಮೊಗವೀರ ಸಮಾಜದ ಕಥೆಯನ್ನ ಒಳಗೊಂಡಿದ್ದು, ಕಾಮಿಡಿ ಜತೆಗೆ ತುಳುವಿಗೊಂದು ಒಳ್ಳೆಯ ಕಮರ್ಷಿಯಲ್ ಸಿನಿಮಾ ನೀಡುವ ಇರಾದೆ ಇಟ್ಟುಕೊಂಡಿದ್ದಾರೆ ಚಿತ್ರದ ನಿರ್ದೇಶಕ ಸಾಕ್ಷಾತ್ .. ಚಿತ್ರಕ್ಕೆ ನಾಯಕಿ ಯಾರೆಂಬ ಗುಟ್ಟನ್ನು ಇನ್ನು ಬಿಟ್ಟುಕೊಟ್ಟಿಲ್ಲ. ಉಳಿದಂತೆ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್ , ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಗೋಪಿನಾಥ್ ಭಟ್, ವಿಸ್ಮಯವಿನಾಯಕ್ , ಮಂಜು ರೈ ಮೂಳೂರು, ಮೊದಲಾದವರ ತಾರಾಗಣವಿದೆ. ಚಿತ್ರದಲ್ಲ್ಲಿ ಒಟ್ಟು ಮೂರು ಹಾಡುಗಳಿದ್ದು, ಇದರಲ್ಲಿ ಹಾಡೊಂದಕ್ಕೆ ದೇವದಾಸ್ ಕಾಪಿಕಾಡ್ ಅವರ ಸಾಹಿತ್ಯ ಬರೆಯಲಿದ್ದಾರೆ. ಉಳಿದಂತೆ ರಘು ಧನ್ವಂತ್ರಿ ಸಂಗೀತ ಸಂಯೋಜನೆ, ಆರೂರು ಸುಧಾಕರ ಶೆಟ್ಟಿ ಅವರ ಕ್ಯಾಮರಾ ಕೈಚಳಕವಿದೆ.