ಮೂಡಬಿದಿರೆ, ಡಿ 21 (Daijiworld News/PY) : ಮೂಡಬಿದಿರೆ ಕೋಟಿ ಚೆನ್ನಯ ಜೋಡುಕೆರ ಕಂಬಳ ಸಮಿತಿ ವತಿಯಿಂದ ನಡೆಯುವ 17ನೇ ವರ್ಷದ ಕೋಟಿ ಚೆನ್ನಯ ಕಂಬಳ ಕೂಟವು ಡಿ. 21ಕ್ಕೆ ನಡೆಯಬೇಕಿತ್ತು. ಆದರೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕಂಬಳಕೂಟವನ್ನು ಡಿ.25ಕ್ಕೆ ಮುಂದೂಡಲಾಗಿದೆ.
ಈ ಬಗ್ಗೆ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಕಮೀಷನರೇಟ್ ವ್ಯಾಪ್ತಿಯ ಪ್ರದೇಶದಲ್ಲಿ ಕರ್ಫ್ಯೂ ವಿಸ್ತರಿಸಿರುವುದರಿಂದ ಕಂಬಳಕ್ಕೆ ಕೋಣಗಳನ್ನು ಕರೆತರಲು ಹಾಗೂ ಜನರ ಆಗಮನಕ್ಕೆ ಕಷ್ಟವಾಗುತ್ತಿದೆ, ಆದ್ದರಿಂದ ಪೊಲೀಸ್ ಇಲಾಖೆಯ ಆದೇಶದಂತೆ ಕಂಬಳವನ್ನು ಡಿ.25ಕ್ಕೆ ಮುಂದೂಡಲಾಗಿದೆ. ಈ ಅಡಚಣೆಗೆ ವಿಷಾದಿಸುವುದಾಗಿ ತಿಳಿಸಿದರು.