ಕಾಸರಗೋಡು, ಜ 20 : ಎ.ಬಿ.ವಿ.ಪಿ ಕಾರ್ಯಕರ್ತ ಶ್ಯಾಮ್ ಪ್ರಸಾದ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಪೆರಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್(20), ಸಲೀಮ್ ( 26), ಸಮೀರ್ ( 25) ಮತ್ತು ಹಾಶಿಂ ( 39) ಎಂದು ಗುರುತಿಸಲಾಗಿದೆ.
ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಜಕೀಯ ದ್ವೇಷವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಐ ಟಿ ಐ ವಿದ್ಯಾರ್ಥಿಯಾಗಿರುವ ಶ್ಯಾಮ್ ಪ್ರಸಾದ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೋಲಯಾಡ್ ಸಮೀಪ ಕಾರಿನಲ್ಲಿ ಬಂದ ತಂಡವು ಮಚ್ಚಿನಿಂದ ಕಡಿದು ಪರಾರಿಯಾಗಿದ್ದರು.
ಕೂತುಪರಂಬದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶ್ಯಾಮ್ ಪ್ರಸಾದ್ ಮೃತಪಟ್ಟಿ ದ್ದರು.