ಮಂಗಳೂರು, ಡಿ 19(Daijiworld News/MSP): ನಗರದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯಿಂದ ಕದ್ರಿ, ಪಾಂಡೇಶ್ವರ, ಬರ್ಕೆ, ಉರ್ವ, ಬಂದರು ಸೇರಿದಂತೆ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾ ಮಧ್ಯರಾತ್ರಿ 12 ಗಂಟೆವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸರು ಕರ್ಫ್ಯೂ ಜಾರಿಗೊಳಿಸಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕಾಣುತ್ತಿಲ್ಲ. ಸ್ಟೇಟ್ ಬ್ಯಾಂಕ್ ಸಮೀಪ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದರೂ ಸೆಂಟ್ರಲ್ ಮಾರ್ಕೆಟ್ ಮತ್ತು ಬಂದರ್ ಸಮೀಪ ಪ್ರತಿಭಟನೆ ತಾರಕ್ಕೇರಿದೆ.
ಪ್ರತಿಭಟನೆಯ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಕಡೆ ಬಸ್ ಗಳು ಸಂಚರಿಸಿದೆ, ಕಂಕನಾಡಿ, ನಂತೂರು ಭಾಗದಲ್ಲಿ ಸಂಚಾರ ದಟ್ಟನೆ ಉಂಟಾಗಿದೆ. ದಿಡೀರ್ ಪ್ರತಿಭಟನೆಯಿಂದ ಬಸ್ ಸಂಚಾರವಿಲ್ಲದೇ ಕಂಗಾಗಲಾದ ಕೆಲಸಗಾರರು , ವಿದ್ಯಾರ್ಥಿಗಳು, ಮನೆಗೆ ಹಿಂತಿರುಗಲಾಗದೇ ಪರದಾಡುತ್ತಿದ್ದಾರೆ
ಸ್ಟೇಟ್ ಬ್ಯಾಂಕ್ ಸಮೀಪ ಕಟ್ಟಡಗಳೊಳಗೆ ಹಲವು ಪ್ರತಿಭಟನಕಾರರು ಅಡಗಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.