ಮಂಗಳೂರು, ಡಿ 19(Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಹಿಂಸಾಚಾರದ ಪ್ರತಿಭಟನೆ ಮುಂದುವರಿದೆ. ನಗರದ ಬಂದರು ಪ್ರದೇಶದಲ್ಲಿ ಕಲ್ಲೆಸೆದು ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ದಾಂಧಲೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದ ಮಾಜಿ ಮೇಯರ್ ಅಶ್ರಫ್ ಅವರ ಮೇಲೂ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ.
ಪ್ರತಿಭಟನೆಯನ್ನು ಹಿಂಪಡೆಯಲು ನಾಲ್ವರು ಮುಖಂಡರೊಂದಿಗೆ ಮಾಜಿ ಮೇಯರ್ ಅಶ್ರಫ್ ತೆರಳಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಕುಪಿತಗೊಂಡ ಪ್ರತಿಭಟನಕಾರು ಮಾಜಿ ಮೇಯರ್ ಅಶ್ರಫ್ ಅವರ ಮೇಲೆ ದಾಳಿ ನಡೆಸಿದ್ದಾರೆ. ಅಶ್ರಫ್ ಅವರ ಮೇಲೆ ಮುಗಿಬಿದ್ದ ಪ್ರತಿಭಟನಕಾರರು ದಾಳಿ ನಡೆಸಿ ಕಲ್ಲೆಸೆಯಲು ಪ್ರಾರಂಭಿಸಿದ್ದಾರೆ. ಕಲ್ಲೆಸೆತದಿಂದ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಗಂಭೀರ ಗಾಯಗೊಂಡ ಅಶ್ರಫ್ ಅವರನ್ನು ತಕ್ಷಣ ಪ್ರತಿಭಟನೆಕಾರರಿಂದ ಬಿಡಿಸಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.