ಮಂಗಳೂರು, ಡಿ 19(Daijiworld News/MSP): ಮಂಗಳೂರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಸ್ಟೇಟ್ ಬ್ಯಾಂಕ್ ಬಳಿ ಧಿಡೀರ್ ಆಗಿ ನಡೆದ ಪ್ರತಿಭಟನೆ ಹಿಂಸಾಚಾರ ತಿರುಗಿದೆ.ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯೂ ರಸ್ತೆ ತಡೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಆದರೂ ಬಗ್ಗದೆ ಬಸ್ ಮೇಲೆ ಕಲ್ಲುತೂರಾಟ ನಡೆಸಿದ ಯುವಕರ ವಿರುದ್ಧ ಪೊಲೀಸರು ಟಿಯರ್ ಗ್ಯಾಸ್ ದಾಳಿ ಮಾಡಿದರು.
ಪರಿಸ್ಥಿತಿ ಕೈ ಮೀರಿದ್ದು ಪ್ರತಿಭಟನಾಕಾರರು ಅಲ್ಲಲ್ಲಿ ಗುಂಪು ಕಟ್ಟಿ ಪೊಲೀಸರ ಮೇಲೆ ಕಲ್ಲು, ಗ್ಲಾಸ್ ಮುಂತಾದ ವಸ್ತು ತೂರುತ್ತಿದ್ದಾರೆ. ಪ್ರತಿಭಟನಕಾರರ ಕಲ್ಲೆಸೆತದಿಂದ ಹಲವು ಜನ ಪತ್ರಕರ್ತರಿಗೂ ಗಾಯಗಳಾಗಿವೆ. ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪೊಲೀಸರು, ಸಾರ್ವಜನಿಕ ಆಸ್ತಿಪಾಸಿಗಳನ್ನು ಹಾಳುಗೆಡವುತ್ತಿದ್ದಾರೆ.
ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.