ಮಂಗಳೂರು, ಜ 20: ಕೆಲ ದಿನಗಳ ಹಿಂದೆ ಗ್ಯಾಂಗ್ ವಾರ್ ಗೆ ಬಲಿಯಾದ ಇಲ್ಯಾಸ್ ಹತ್ಯೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಲ್ಯಾಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹೇಗೆ ಸಾಧ್ಯ ಎಂದು ಕೆಲ ವೇದಿಕೆಗಳಲ್ಲಿ ಪ್ರಸ್ತಾಪ ಮಾಡಿದ್ದೇನೆಯೇ ಹೊರತು ನನಗೆ ಇಲ್ಯಾಸ್ ಮೇಲೆ ಯಾವುದೇ ವ್ಯೆಯಕ್ತಿಕ ದ್ವೇಷ ಇರಲಿಲ್ಲ. ನನ್ನನ್ನು ಕೊಲೆ ಮಾಡಿಲು ಯತ್ನಿಸಿದ ಆರೋಪಿಗಳಿಗೆ ಶಿಕ್ಷೆಯಾಗಲು ಕಾನೂನು ಹೋರಾಟ ಮಾಡಿದ್ದೇನೆ. ಆದರೆ ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಹೋದವನಲ್ಲ ಎಂದು ಹೇಳಿದ್ದಾರೆ.
ಯಾರದೋ ಪ್ರಭಾವಕ್ಕೆ ಒಳಗಾಗಿ ಇಲ್ಯಾಸ್ ಪತ್ನಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ. ಈ ಕೊಲೆ ಪ್ರಕರಣ ಶೀಘ್ರ ಬಗೆಹರಿಸಿ, ಗೊಂದಲ ನಿವಾರಿಸಬೇಕು ಎಂದು ತಿಳಿಸಿದ್ದಾರೆ.