ಬಂಟ್ವಾಳ, ಜ 19: ಇಲ್ಲಿನ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಮಜಲು ಎಂಬಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೆತುವೆಯ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲು ವೀಕ್ಷಣೆ ನಡೆಸಿದರು.
ಸಂಸದ ನಳಿನ್ ಅವರು ಅಲ್ಲಿನ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದಿದ್ದು, ಸಮಸ್ಯೆಗಳನ್ನು ಸರಿಪಡಿಸಲು ರೈಲ್ವೆ ಇಲಾಖೆಯ ಅಧಿಕಾರಗಳ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ತಾ.ಪಂ.ಉಪಾಧ್ಯಕ್ಷ, ಎಸ್ ಸಿ ಮೋರ್ಚಾದ ಜಿಲ್ಲಾದ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಗೋಳ್ತಮಜಲು ಅದ್ಯಕ್ಷೆ ಜಯಲಕ್ಮೀ ಭಟ್, ಅಲ್ಪಸಂಖ್ಯಾತ ಮೋರ್ಚಾದ ಅದ್ಯಕ್ಷ, ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ರಾದ ಮಹಮ್ಮದ್ ಮುಸ್ತಫಾ, ಯುವ ಮೋರ್ಚಾದ ಅದ್ಯಕ್ಷ ವಜ್ರನಾಥ ಕಲ್ಲಡ್ಕ, ಪಂ.ಸದಸ್ಯರಾದ ಬಿ.ಕೆ.ಶೇಖರ್ ಕೊಟ್ಟಾರಿ, ಮೋನಪ್ಪ ದೇವಶ್ಯ, ಲಲಿತಾ, ಜಯಶ್ರೀ, ಗಿರೀಶ್ ನೆಟ್ಲ, ಗುರುವಪ್ಪ ಗೌಡ, ಗೋಪಾಲಕೃಷ್ಣ ಪೂವಳ, ವಾಸು ಮತ್ತಿತರರು ಉಪಸ್ಥಿತರಿದ್ದರು.