ಮಂಗಳೂರು, ಡಿ 15 (Daijiworld News/MB) : ತಲಪಾಡಿ ಟೋಲ್ಗೇಟ್ ಬಳಿ ಖಾಸಗಿ ಬಸ್ ಸಿಬ್ಬಂದಿ ಹಾಗೂ ಟೋಲ್ಗೇಟ್ ಸಿಬ್ಬಂದಿ ನಡುವೆ ಪಾಸ್ಟ್ಟ್ಯಾಗ್ ಕುರಿತು ನಡೆದ ಚರ್ಚೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಡಿಸೆಂಬರ್ 15ರಿಂದ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಿದೆ.
ತಲಪಾಡಿಯಿಂದ ಮಂಗಳೂರಿಗೆ ಟೋಲ್ ಗೇಟ್ ಮೂಲಕ ಹಲವಾರು ಬಸ್ಸುಗಳು ಚಲಿಸುತ್ತವೆ. ಈ ಹೊಸ ನಿಯಮದಿಂದಾಗಿ ಸಮಯವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಬೇಕಾದದ್ದು ನಗರದ ಬಸ್ಗಳಿಗೆ ತೊಂದರೆ ಉಂಟು ಮಾಡಿದೆ. ಫಾಸ್ಟ್ಯಾಗ್ಗಾಗಿ ಕೇವಲ ಒಂದೇ ಕೌಂಟರ್ನ್ನು ತೆರೆದಿದ್ದು ಜನರು ಕ್ಯೂ ನಿಂತಿದ್ದರು.
ಇನ್ನೊಂದು ಕೌಂಟರ್ ತೆರೆಯುವಂತೆ ನಗರದ ಬಸ್ ಸಿಬ್ಬಂದಿ ಟೋಲ್ ಗೇಟ್ ಸಿಬ್ಬಂದಿಗೆ ಒತ್ತಡ ಹೇರಿದ್ದು ಈ ಕುರಿತು ಮಾತು ಬೆಳೆದಿದೆ.
ಈ ಸಂದರ್ಭದಲ್ಲಿ ಖಾಸಗಿ ಬಸ್ನ ಸಿಬ್ಬಂದಿ "ರಜಾದಿನವಾದ ಭಾನುವಾರದಂದು ಪರಿಸ್ಥಿತಿ ಹೀಗೆ ಆದರೆ ಇನ್ನೂ ವಾರದ ಉಳಿದ ದಿನಗಳಲ್ಲಿ ಹೇಗೆ?" ಎಂದು ಪ್ರಶ್ನಿಸಿದರು.
ಖಾಸಗಿ ಬಸ್ಗಳಿಗೆ ಅಥವಾ ಫಾಸ್ಟ್ಯಾಗ್ ಗೆ ಪ್ರತ್ಯೇಕ ಕೌಂಟರ್ ತೆರೆಯುವವರೆಗೂ ಖಾಸಗಿ ನಗರ ಬಸ್ ಸಿಬ್ಬಂದಿಗಳು ತಲಪಾಡಿ ಟೋಲ್ ಗೇಟ್ನಿಂದ ಬಸ್ ತೆಗೆಯುವುದಿಲ್ಲ ಎಂದು ಹೇಳಿ ಬಸ್ ಅಲ್ಲೇ ನಿಲ್ಲಿಸಿದ್ದು ಇದರಿಂದಾಗಿ ಕಾಸರಗೋಡು ಕೇರಳದಂತಹ ದೂರದ ಸ್ಥಳಗಳದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.
ಮಂಗಳೂರಿನಿಂದ ತಲಪಾಡಿ ಬಸ್ ನಿಲ್ದಾಣದವರೆಗೆ ಸಂಚಾರ ಮಾಡುತ್ತಿದ್ದ ಖಾಸಗಿ ಬಸ್ಗಳು ಟೋಲ್ಗೇಟ್ನಲ್ಲಿ ಫಾಸ್ಟ್ಯಾಗ್ನಿಂದಾಗಿ ಆಗುತ್ತಿರುವ ವಿಳಂಬದಿಂದಾಗಿ ಕೊನೆಯ ನಿಲ್ದಾಣಕ್ಕೆ ಸಂಚಾರ ಮಾಡದೆ ಟೋಲ್ಗೇಟ್ ಮುಂಚಿತವಾಗಿ ಹಿಂದಕ್ಕೆ ಹೋಗುತ್ತಿದೆ. ಇದರಿಂದಾಗಿ ಮಂಗಳೂರಿಗೆ ತೆರಳುವ ಪ್ರಯಾಣಿಕರು ೧ ಕಿ.ಮೀ. ನಡೆಯಬೇಕಾದ ಇಕ್ಕಟ್ಟಿಗೆ ಸಿಲುಕಿ ಕೊಂಡಿದ್ದಾರೆ.