ಮಂಗಳೂರು, ಜ 19: ಲವ್ ಜಿಹಾದ್ ಮಟ್ಟಹಾಕಲು ಹಿಂದೂ ಟಾಸ್ಕ್ಪೋರ್ಸ್ ಸಂಘಟನೆ ಕಟ್ಟಲಾಗಿದ್ದು, ಮುಂದಿನ ಫೆಬ್ರವರಿಯಿಂದ ಕಾರ್ಯಾಚರಣೆ ನಡೆಸಲಿದೆ ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಹಿಂದೂ ಟಾಸ್ಕ್ಪೋರ್ಸ್ ಸಂಘಟನೆ ಭಾರತದ ಸಂವಿಧಾನ ಮತ್ತು ಕಾನೂನು ಚೌಕಟ್ಟಿನೊಳಗೆ ಇದು ಕಾರ್ಯಾಚರಣೆ ನಡೆಸಲಿದೆ. ಕಾನೂನು ಪ್ರಕಾರ ಇದು ನೋಂದಾವಣಿಯಾಗಿದೆ. ಹಿಂದೂ ಟಾಸ್ಕ್ಪೋರ್ಸ್ ಯಾವುದೇ ಕಾರಣಕ್ಕೂ ನಿಯಮ ಮೀರಿ ಹೋಗಲ್ಲ. ಧರ್ಮ-ಕಾನೂನಿನಡಿಯಲ್ಲಿ ಹಿಂದೂ ಸಮಾಜದ ರಕ್ಷಣೆ ಈ ಸದಸ್ಯರ ಮುಖ್ಯ ಉದ್ದೇಶ. ಟಾಸ್ಕ್ಪೋರ್ಸ್ ಸದಸ್ಯರಿಗೆ ಗುರುತಿನ ಚೀಟಿ, ಕಾರ್ಯಗಾರ ನಡೆಸಲಾಗುವುದು. ಇದು ಮಾತ್ರವಲ್ಲದೆ ಸದಸ್ಯನಾಗಿ ಜವಾಬ್ದಾರಿ ಸ್ವೀಕರಿಸುವಾಗ ಪ್ರಮಾಣ ವಚನವನ್ನು ಬೋಧನೆಯೂ ನಡೆಯಲಿದೆ ಎಂದು ಹೇಳಿದರು.
ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹಿಂದೂ ಟಾಸ್ಕ್ಪೋರ್ಸ್ ಸಂಘಟನೆ ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ 24 ಮಂದಿ ಸದಸ್ಯರನ್ನೊಳಗೊಂಡ ರಾಷ್ಟ್ರಮಟ್ಟದ ಸಮಿತಿ ರಚಿಸಲಾಗಿದ್ದು ಇದರಲ್ಲಿ ವೈದ್ಯರು, ವಕೀಲರು, ಐಟಿ ಎಂಜಿನಿಯರ್ಗಳು, ಸಾಮಾಜಿಕ ಕಾರ್ಯಕರ್ತರು, ಯುವಕ- ಯುವತಿಯರನ್ನೊಳಗೊಂಡ ಕೌನ್ಸೆಲಿಂಗ್ ತಂಡಗಳು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.