ಶ್ರೀನಗರ, ಜ 18: ಜಮ್ಮುಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ್ದು, ಒಬ್ಬ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ.
ಮೃತ ಯೋಧನನ್ನು ಎ. ಸುರೇಶ್ ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದವರಾದ ಇವರು ಬಿಎಸ್ಎಫ್ ಪಡೆಯ 78 ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಾಗರಿಕರ ಮೇಲೆ ಕೂಡ ದಾಳಿ ನಡೆದಿದ್ದು,ಈ ದಾಳಿಯಲ್ಲಿ ನೀಲಮ್ ದೇವಿ (17) ಎಂಬ ಯುವತಿಯು ಸಾವಿಗೀಡಾಗಿದ್ದಾಳೆ. ಒಬ್ಬ ಯೋಧ ಹಾಗೂ 5 ಮಂದಿ ನಾಗರಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಡಿ ಭಾಗದಲ್ಲಿನ 20 ಗುಡ್ಡಗಾಡು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಯೋಧರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.