ಕಾಸರಗೋಡು, ಡಿ 12 (Daijiworld News/MB) : ಆರು ವರ್ಷದ ಮಗುವನ್ನು ತಾಯಿಯು ಮರೆತು ಬಸ್ನಲ್ಲೇ ಬಿಟ್ಟು ಹೋದ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಆದರೆ ಪೊಲೀಸರು ಮಗುವನ್ನು ಸಂಬಂಧಿಕರಿಗೆ ನೀಡಿದ ಬಳಿಕವಷ್ಟೆ ತಾಯಿಗೆ ಮಗುವನ್ನು ಮರೆತಿರುವುದು ಜ್ಞಾಪಕವಾಗಿದೆ.
ಬಸ್ ಹೊಸ ಬಸ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಅಳುತ್ತಿರುವ ಮಗುವನ್ನು ಗಮನಿಸಿದ ಸಿಬಂದಿ ಮಗುವನ್ನು ಪಿಂಕ್ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಪೊಲೀಸರು ಮಗುವಿನ ಕೈಯಲ್ಲಿದ್ದ ಶಾಲಾ ಬ್ಯಾಗ್ನಲ್ಲಿದ್ದ ಡೈರಿಯಲ್ಲಿ ಇದ್ದ ಪೋನ್ ಸಂಖ್ಯೆಗೆ ಕರೆ ಮಾಡಿದಾಗ ಯಾರೂ ಸ್ವೀಕರಿಸಲಿಲ್ಲ. ಬಳಿಕ ಪೊಲೀಸರು ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯವರ ಮುಖಾಂತರ ಸಂಬಂಧಿಕರನ್ನು ಕರೆಸಿ ಮಗುವನ್ನು ಹಸ್ತಾಂತರ ಮಾಡಿದ್ದಾರೆ.
ತಾಯಿಯು ವಿದ್ಯಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ನೋಡಲೆಂದು ಹೋಗಿದ್ದು ಬಸ್ನಲ್ಲಿ ಮಗುವನ್ನು ಮರೆತು ಬಿಟ್ಟು ಹೋಗಿದ್ದಾರೆ. ಆದರೆ ತಾಯಿಗೆ ಮಗುವನ್ನು ಕರೆದುಕೊಂಡು ಬಂದಿರುವ ವಿಷಯ ನೆನಪಾದದ್ದು ಪೊಲೀಸರು ಮಗುವನ್ನು ವಾರಸುದಾರರಿಗೆ ಒಪ್ಪಿಸಿದ ಬಳಿಕವಷ್ಟೇ.