ಅಹಮದಾಬಾದ್, ಜ 18: ನನ್ನ ವಿರುದ್ಧ ಕ್ರೈಂ ಬ್ರ್ಯಾಂಚ್ ನಡೆಸಿದ ಪಿತೂರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈವಾಡವಿದೆ ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಆರೋಪಿಸಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಜೆ.ಕೆ. ಭಟ್ ದೆಹಲಿಯ ಪ್ರಭಾವಿ ರಾಜಕೀಯ ನಾಯಕರ ಸೂಚನೆಯಂತೆನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈ ಷಡ್ಯಂತ್ರದಲ್ಲಿ ಮೋದಿಯ ಕೈವಾಡ ಇದೆ ಎಂದು ಹೇಳಿದ್ದಾರೆ.
ಭಟ್ ಅವರ ದೂರವಾಣಿ ಕರೆಗಳ ವಿವರ ಪರಿಶೀಲಿಸಬೇಕು. ಆಗ ಕಳೆದ 15 ದಿನದಲ್ಲಿ ಅವರು ಎಷ್ಟು ಬಾರಿ ಪ್ರಧಾನಿಯ ಜತೆ ಮಾತನಾಡಿದ್ದಾರೆ ಎನ್ನುವುದು ಬಹಿರಂಗವಾಗುತ್ತದೆ. ಮೋದಿ ಸೂಚನೆಯ ಮೇರೆಗೆ ಕ್ರೈಂ ಬ್ರ್ಯಾಂಚ್ ತಮ್ಮ ವಿರುದ್ಧ ಪಿತೂರಿ ನಡೆಸಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.