ಬೆಂಗಳೂರು, ಜ 18: ಸ್ಟಾರ್ ನಿರ್ದೇಶಕ, ಹಿರಿಯ ನಟ, ನಿರ್ಮಾಪಕ ಕಾಶಿನಾಥ್ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಕಾಶಿನಾಥ್ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ತಂದಿದೆ. ಹಲವು ವರ್ಷಗಳ ಕಾಲ ನಗುತ್ತಾ, ನಗಿಸುತ್ತಾ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಾ ಬಂದ ಕಾಶಿನಾಥ್ ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.