ಸೆ16: ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಹೆತ್ತವರೇ ಸೂಕ್ಷ್ಮವಾಗಿ ಗಮನಿಸುವಂತೆ,ಮಕ್ಕಳ ಮೊಬೈಲ್, ಕಂಪ್ಯೂಟರ್ಗಳಲ್ಲಿ ಹೊಸ ಸಂಪರ್ಕ ಸಂಖ್ಯೆ, ಇ-ಮೇಲ್ಗಳಿದ್ದರೆ ಅದರ ಮೇಲೂ ನಿಗಾ ಇಡುವಂತೆ ಶುಕ್ರವಾರ ಕೇಂದ್ರ ಸರಕಾರ ಎಚ್ಚರಿಕೆಯ ಸುತ್ತೋಲೆ ಹೊರಡಿಸಿದೆ. ಮಕ್ಕಳ ಎದುರು ಕುತೂಹಲಕ್ಕಾಗಿ ಗೇಮ್ ಬಗ್ಗೆ ಮಾತನಾಡಿದರೆ ಅವರು ಅದರ ಬಗ್ಗೆ ಕುತೂಹಲ ದಿಂದ ಇಂಟರ್ನೆಟ್ನಲ್ಲಿ ಹುಡು ಕಾಡಬಹುದು. ಹೀಗಾಗಿ ಅದನ್ನು ನಡೆಸದಂತೆ ಮನವಿ ಮಾಡಲಾಗಿದೆ. ದೇಶದಲ್ಲಿ ಈಗಾಗಲೇ ಮಾರಕ ಬ್ಲೂವೇಲ್ ಗೇಮ್ನಿಂದ ಒಂಬತ್ತು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ .ಹೀಗಾಗಿ ಪೋಷಕರಿಗೆ ಮೊಬೈಲ್ ಮತ್ತು ಕಂಪ್ಯೂಟರ್ಗಳಲ್ಲಿ ಉತ್ತಮ ದರ್ಜೆಯ ಪೇರೆಂಟಲ್ ಲಾಕ್ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ನಡುವೆ ಗೇಮ್ ಮೇಲೆ ನಿಷೇಧ ಹೇರಲು ಕೇಂದ್ರಕ್ಕೆ ನಿರ್ದೇಶನ ನೀಡು ವಂತೆ ಒತ್ತಾಯಿಸಿ ಮಧುರೈಯ ಎನ್.ಎಸ್. ಪೊನ್ನಯ್ಯನ್ (73) ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನೆರವು ನೀಡಬೇಕು ಎಂದು ಕೋರಿದೆ. ಮಧುರೈಯಲ್ಲಿನ ಪ್ರಕರಣದ ಬಳಿಕ ಅವರು ಸುಪ್ರೀಂಗೆ ಮನವಿ ಮಾಡಿದ್ದರು.