ಕಾಸರಗೋಡು, ಡಿ 10 (DaijiworldNews/SM): ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧ ಆರೋಪಿಗೆ ಹತ್ತು ವರ್ಷ ಕಠಿಣ ಸಜೆ ಹಾಗೂ ಹದಿನೈದು ಸಾವಿರ ರೂಪಾಯಿ ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಕಾಞ೦ಗಾಡ್ ನ ಎಚ್.ವಿ. ರವೀಂದ್ರನ್(63) ಅಪರಾಧಿಯಾಗಿದ್ದಾನೆ.
16 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 18 ದಾಖಲೆಗಳನ್ನು ಸಲ್ಲಿಸಲಾಗಿತ್ತು. ಪ್ರಾಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ಹಾಜರಾಗಿದ್ದರು.
2016ರ ಮೇ ಒಂದರಂದು ಅಪರಾಧಿ ಕೃತ್ಯ ಎಸಗಿದ್ದ. ಆರು ವರ್ಷದ ಬಾಲಕಿಯನ್ನು ರವೀಂದ್ರನ್ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರು ದಾಖಲಾಗಿತ್ತು. ಪೋಕ್ಸೋ ಕಾಯ್ದೆಯಂತೆ ರವೀಂದ್ರನ್ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.