ಬೆಂಗಳೂರು, ಜ 18: ಸ್ಟಾರ್ ನಿರ್ದೇಶಕ, ಹಿರಿಯ ನಟ, ನಿರ್ಮಾಪಕ ಕಾಶಿನಾಥ್ ಅಗಲಿಕೆಗೆ ಅಗಲಿಕೆಗೆ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.
ಎಂಥ ದುರ್ದೈವ.. ಅವರ ಅನುಭವ ಚಿತ್ರಕ್ಕೆ ನನಗೆ ಪಾತ್ರಕೊಡಿಸಲು ನನ್ನ ಗುರುಗಳು ಛಾಯಾಗ್ರಹಕ ಸುಂದರ್ ನಾಥ ಸುವರ್ಣ ರವರು ಕರೆದುಕೊಂಡು ಹೋಗಿದ್ದರು. ಅವಕಾಶ ಸಿಗಲಿಲ್ಲ. ಆದರೆ ಮುಂದೆ ಅವರ ಜೊತೆ ಮನ್ಮಥ ಚಿತ್ರದಲ್ಲಿ ನಟಿಸಿದೆ. ತುಂಬ ಸಾಧು ಸ್ವಭಾವದ ಮನುಷ್ಯ. ಯಾರಿಗೂ ನೋಯಿಸದ ಸ್ನೇಹಜೀವಿ. ಇಷ್ಟುಬೇಗ ಹೋದರ ಎಂದು ನೋವಾಯಿತು. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಬಹುತೇಕ ಸ್ಟಾರ್ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ ಕಾಶಿನಾಥ್. ಅವರ ಸಂಭಾವನೆ ಆ ಕಾಲದಲ್ಲೇ 5ಲಕ್ಷ, ನನಗೆ 4,000. ಯಾವಾಗ ಅವರಷ್ಟು ಸಂಭಾವನೆ ನನಗೆ ಸಿಗುತ್ತೆ ಅಂತ 90ಹಾಕಿ ಯೋಚಿಸುತ್ತಿದ್ದೆ. ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್ ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ.
ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದುಬೈನಿಂದ ಕಾಶಿನಾಥ್ ಅವರ ಮಗಳು ಹೊರಟಿದ್ದಾರೆ, ಸಂಜೆ 4ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬಂದ ನಂತರ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕಾಶಿನಾಥ್ ಸಹೋದರಿ ಗಾಯಿತ್ರಿ ತಿಳಿಸಿದ್ದಾರೆ.