ಮಂಗಳೂರು, ಡಿ 10 (Daijiworld News/MB) : ನಿರ್ಮಾಣ್ ಹೋಮ್ಸ್ ಸಂಸ್ಥೆ ನಗರದ ದೇರೆಬೈಲ್ನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಿರ್ಮಾಣ್ ಮಥುರಾ ವಸತಿ ಸಮುಚ್ಚಯದಲ್ಲಿ ಮಾದರಿ ಫ್ಲಾಟ್ನ್ನು ಸೋಮವಾರ ಉದ್ಘಾಟಿಸಲಾಯಿತು.
ಸ್ಥಳದ ಮಾಲೀಕ ಸೂರಜ್ ಕೋಟ್ಯಾನ್ ಉದ್ಘಾಟಿಸಿ, "ನಿರ್ಮಾಣ್ ಹೋಮ್ ಸಂಸ್ಥೆ ಗ್ರಾಹಕರ ಮನಸ್ಥಿತಿಗೆ ತಕ್ಕ ಫ್ಲಾಟ್ನ್ನು ನಿರ್ಮಿಸಿ ಸಮಂಜಸ ಬೆಲೆಗೆ ನೀಡುತ್ತಿದೆ. ಇದೇ ಕಾರಣಕ್ಕೆ ಗ್ರಾಹಕರ ಮೆಚ್ಚುಗೆಗೂ ಸಂಸ್ಥೆ ಪಾತ್ರವಾಗಿದೆ" ಎಂದರು.
ನಿರ್ಮಾಣ್ ಹೋಮ್ಸ್ ಆಡಳಿತ ಪಾಲುದಾರ ಕೃಷ್ಣರಾಜ್ ಸಾಲ್ಯಾನ್, ಮಾರ್ಕೆಟಿಂಗ್ ಮ್ಯಾನೇಜರ್ ಸುಭಾಷ್ ನಾಯಕ್, ಪ್ರಾಜೆಕ್ಟ್ ಇಂಜಿನಿಯರ್ ಸುಶಾಂತ್ ಆಚಾರ್, ಪ್ರಶಾಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ವಸತಿ ಸಮುಚ್ಚಯ ಉನ್ನತ ಗುಣಮಟ್ಟದಲ್ಲಿ ನಿರ್ಮಾಣಗೊಂಡಿದೆ. ಅಪಾರ್ಟ್ಮೆಂಟ್ನಲ್ಲಿ 1 ಬೆಡ್ ರೂಮ್ ಫ್ಲಾಟ್ (635,685 ಹಾಗೂ 715 ಚ.ಅಡಿ ವಿಸ್ತೀರ್ಣ) ದರ 25 ಲಕ್ಷ ಹಾಗೂ 2 ಬೆಡ್ ರೂಮ್ ಫ್ಲಾಟ್ (905 ಹಾಗೂ1015 ಚ.ಅಡಿ) ದರ 35 ಲಕ್ಷಗಳಿಂದ ಪ್ರಾರಂಭಗೊಳ್ಳುತ್ತದೆ.
ನಿರ್ಮಾಣ್ ಹೋಮ್ ಸಂಸ್ಥೆಯು ಕಟ್ಟಡ ನಿರ್ಮಾಣದಲ್ಲಿನ ಗುಣಮಟ್ಟ, ನಾವೀನ್ಯ, ಬದ್ಧತೆ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಿಶಿಷ್ಟವಾದ ಫ್ಲಾಟ್ಗಳನ್ನು ನೀಡುತ್ತಾ ಬಂದಿದೆ. ನಿರ್ಮಾಣ್ ಮಥುರಾ ರಾಷ್ಟ್ರೀಯ ಹೆದ್ದಾರಿ ಹಾಗೂ ನೇರವಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ದ್ವಿಪಥ ರಸ್ತೆಯೊಂದಿಗೆ ಬಸ್, ಟ್ಯಾಕ್ಸಿ ಹಾಗೂ ಆಟೋ ಸಾರಿಗೆಯನ್ನು ಈ ಪ್ರದೇಶ ಹೊಂದಿದೆ. ಈಗಾಗಲೇ ಶೇ.80ರಷ್ಟು ಫ್ಲಾಟ್ಗಳು ಖರೀದಿಯಾಗಿದೆ.
ಫ್ಲಾಟ್ನ ವಿಶೇಷತೆ
ನಿರ್ಮಾಣ್ ಮಥುರಾ ಅಪಾರ್ಟ್ಮೆಂಟ್ ಚಿಲ್ಡ್ರನ್ಸ್ ಪ್ಲೇ ಏರಿಯಾ, ಫುಲ್ಲಿ ಎಕ್ಯುಫೈಡ್ ಜಿಮ್ನಾಸಿಯಂ, ಫೈರ್ಫೈಟಿಂಗ್ ಸಿಸ್ಟಮ್, 3 ಫುಲ್ಲಿ ಆಟೋಮಾಟಿಕ್ ಲಿಫ್ಟ್, ರೆಟಿಕ್ಯುಲೇಟಡ್ ಗ್ಯಾಸ್ ಕನೆಕ್ಷನ್, ಇಂಡೋರ್ ಗೆಮ್ಸ್, ಮಲ್ಟಿ ಪರ್ಪಸ್ಸ್ ಪಾರ್ಟಿ ಹಾಲ್, ಜನರೇಟರ್ ಬ್ಯಾಕ್ಅಪ್, ಸೋಲಾರ್ ವಾಟರ್ ಹೀಟರ್, ವೈಫೈ ಕನೆಕ್ಟಿವಿಟಿ, ಸಿಸಿಟಿವಿ ಕಾಮೆರಾ, ಬೋರ್ವೆಲ್ ವಾಟರ್ಗಳಂತಹ ವೈಶಿಷ್ಟ್ಯಗಳನ್ನೊಳಗೊಂಡಿದ್ದು ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಗರದ ಕಾಪಿಕಾಡ್ನ ಸುಪ್ರಭಾತ ಬಿಲ್ಡಿಂಗ್ನಲ್ಲಿರುವ ನಿರ್ಮಾಣ್ ಹೋಮ್ಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.