ಬೆಂಗಳೂರು, ಜ 18: ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಿದ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ವಿಧಿವಶರಾಗಿದ್ದಾರೆ.
ಹಿರಿಯ ನಟ ಕಾಶಿನಾಥ್ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2 ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಶ್ರೀ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.
ಕಾಶಿನಾಥ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟ ಜಗ್ಗೇಶ್, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಅನೇಕ ಹೊಸ ಮುಖಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕಾಶಿನಾಥ್ ಅಮರ ಮಧುರ ಪ್ರೇಮ, ಅನುಭವ, ಅನಾಮಿಕ, ಅವಳೇ ನನ್ನ ಹೆಂಡ್ತಿ, ಮಿಥಿಲೆಯ ಸೀತೆಯರು, ಅದೃಷ್ಟ ರೇಖೆ, ಲವ್ ಮಾಡಿ ನೋಡು, ಮೀಸೆ ಹೊತ್ತ ಗಂಡಸಿಗೆ ದಿಮ್ಯಾಂದಪ್ಪೋ ಡಿಮ್ಯಾಂಡು ಸೇರಿದಂತೆ 43 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ.
ಕಾಶಿನಾಥ್ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.