ಮಂಗಳೂರು, ಡಿ 12 (DaijiworldNews/SM): ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಮತ್ತೊಮ್ಮೆ ಮಾಲಾಡಿ ಅಜಿತ್ ಕುಮಾರ್ ರೈ ಅವರು ಆಯ್ಕೆಯಾಗಿದ್ದಾರೆ.
ಬಹುನಿರೀಕ್ಷೆ ಮೂಡಿಸಿದ್ದ ಬಂಟರ ಚುನಾವಣೆ ಭಾನುವಾರ ನಡೆದಿದ್ದು, ಅಜಿತ್ ಕುಮಾರ್ ರೈ ಹಾಗೂ ಸುರೇಶ್ಚಂದ್ರ ಶೆಟ್ಟಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಈ ಇಬ್ಬರು ಅಭ್ಯರ್ಥಿಗಳ ಮುಸುಕಿನ ಗುದ್ದಾಟ ನಡೆದಿತ್ತು.
ಅಂತಿಮವಾಗಿ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಂಡಿದ್ದು, ಮಾಲಾಡಿ ಅಜಿತ್ ಕುಮಾರ್ ರೈ 4,791 ಮತ ಪಡೆದಿದ್ದರು. ಸುರೇಶ್ಚಂದ್ರ ಶೆಟ್ಟಿ 2193 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.
ಅಂತಿಮವಾಗಿ ಮಾಲಾಡಿ ಅಜಿತ್ ಕುಮಾರ್ ಅವರು ಸುರೇಶ್ಚಂದ್ರ ವಿರುದ್ಧ 2,598 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಅಜಿತ್ ಕುಮಾರ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.