ನಗರದ ಹೊಟೇಲ್ ಗಳಿಗೆ ಪೋನ್ ಮಾಡಿ ಅಥವಾ ಆನ್ ಲೈನ್ ಮೂಲಕ ಫುಡ್ ಆರ್ಡರ್ ಮಾಡಿದರೆ, ಡೆಲಿವರಿ ಮಾಡೋದು ಇಂತಿಷ್ಟೇ ಕಿ.ಮೀ ದೂರದೊಳಗೆ ಮಾತ್ರ ಎನ್ನುವ ನಿಬಂಧನೆಗಳನ್ನು ಹಲವು ಹೊಟೇಲ್ ಗಳು ಹಾಕಿಕೊಂಡಿರುತ್ತದೆ. ಆದರೆ ಇಂಗ್ಲೆಂಡ್ ನಲ್ಲಿರುವ ಭಾರತೀಯ ರೆಸ್ಟೊರೆಂಟ್ವೊಂದು ಫುಡ್ ಆರ್ಡರ್ ಮಾಡಿದ 500 ಮೈಲಿ ದೂರವಿರುವ ತನ್ನ ಗ್ರಾಹಕನಿಗೆ ಖಾಸಗಿ ವಿಮಾನವೊಂದನ್ನು ಬಾಡಿಗೆ ಪಡೆದು ಆಹಾರವನ್ನು ಡೆಲಿವರಿ ಮಾಡಿ ಬಂದಿದೆ.
ಅಶ್ವರ್ಯವೆನಿಸಿದರೂ ನಿಜ.. ಹಲವು ಭಾರತೀಯ ರೆಸ್ಟೊರೆಂಟ್ ಗಳಲ್ಲಿ ಉಂಡರೂ ಫ್ರಾನ್ಸ್ ನ ಜೇಮ್ಸ್ ಎಮೆರಿ ಎನ್ನುವವರಿಗೆ ಆಕಾಶ್ ರೆಸ್ಟೊರೆಂಟ್ ನಲ್ಲಿ ಸಿಗುತ್ತಿದ್ದ ರುಚಿಯಾದ ಚಿಕನ್ ಕರ್ರಿ ಸಿಗುತ್ತಿರಲಿಲ್ಲ. ಕಡೆಗೆ ಹೊಟೇಲ್ ಗೆ ಕರೆ ಮಾಡಿ 89 ಜನರಿಗೆ ಆಗುವಷ್ಟು ಊಟ ಆರ್ಡರ್ ಮಾಡಿದರು. ಅದನ್ನು ಹೊಟೇಲ್ ಕೂಡಾ ಒಪ್ಪಿತು.
ಇಂಗ್ಲೆಂಡ್ ನ ಹ್ಯಾಂಪ್ಶೈರ್ನಲ್ಲಿರುವ ಆಕಾಶ್ ರೆಸ್ಟೊರೆಂಟಿನಿಂದ ಚಿಕನ್ ಫಾಲ್ ಕರ್ರಿ ಜೊತೆಗೆ ಮತ್ತಷ್ಟು ಖಾದ್ಯಗಳನ್ನ ಫ್ರಾನ್ಸ್ ನ ಬಾರ್ಡಿಯಾಕ್ಸ್ ಗೆ ವಿಮಾನದ ಮೂಲಕ ಡೆಲಿವರಿ ಮಾಡಿದರು. ಫ್ರಾನ್ಸ್ ನಲ್ಲಿ ವಾಸವಿರುವ ಪೈಲಟ್ ಜೇಮ್ಸ್ ಎಮೆರಿ ಹಾಗೂ ಅವರ ಸ್ನೇಹಿತರಿಗಾಗಿ ಊಟವನ್ನ 500 ಕಿ.ಮೀ ದೂರ ಕಳಿಸಿಕೊಡಲಾಗಿದೆ. 100 ಚಿಕನ್ ಕರ್ರಿ ಜೊತೆಗೆ, 170 ಡಿಶ್ಗಳು, 75 ಪ್ಲೇಟ್ ಅನ್ನ, 100 ಹಪ್ಪಳ ಹಾಗೂ 10 ಮಾವಿನಕಾಯಿ ಚಟ್ನಿಯನ್ನ ಆರ್ಡರ್ ಮಾಡಲಾಗಿತ್ತು. ಆಕಾಶ್ ರೆಸ್ಟೊರೆಂಟ್ ತನ್ನ ಫೇಸ್ಬುಕ್ ಪೇಜಿನಲ್ಲಿ ಚಿಕನ್ ಕರ್ರಿಯನ್ನ ಫ್ರಾನ್ಸ್ ಗೆ ಕಳಿಸಿಕೊಡುತ್ತಿರುವ ವಿಡಿಯೋಗಳನ್ನ ಹಂಚಿಕೊಂಡಿದೆ. ನಾನು ಕಳೆದ 20 ವರ್ಷಗಳಿಂದ ಆಕಾಶ್ ರೆಸ್ಟೊರೆಂಟಿನ ಗ್ರಾಹಕನಾಗಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಚಿಕನ್ ಫಾಲ್ ಕರ್ರಿ ಸವಿಯುತ್ತೇನೆ. ಫ್ರಾನ್ಸ್ ನಲ್ಲಿ ಸಿಗೋ ಭಾರತೀಯ ಊಟದ ರುಚಿ ಅಷ್ಟೊಂದು ಚೆನ್ನಾಗಿರಲ್ಲ ಎಂದು ಎಮೆರಿ ತಿಳಿಸಿದ್ದಾರೆ.
ಆಕಾಶ್ ರೆಸ್ಟೊರೆಂಟ್ ಹೊಟೇಲ್ ಕೂಡಾ ತನ್ನ ಗ್ರಾಹಕನಿಗೆ 500 ಮೈಲಿಯಷ್ಟು ದೂರ ಸಾಗಿ ಆಹಾರ ಡೆಲಿವರಿ ಮಾಡಿದರೂ ಪಾರ್ಸೆಲ್ ಹಣವನ್ನು ತೆಗೆದುಕೊಳ್ಳಲಿಲ್ಲ.