ಮಂಗಳೂರು, ಡಿ 08 (Daijiworld News/MB) : ಕೆಎಸ್ಆರ್ಟಿಸಿ ಬಸ್ ಆ್ಯಕ್ಟೀವಾ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಅಡ್ಡೂರು ನಿವಾಸಿ ಹಮೀದ್ (50) ಎಂದು ಗುರುತಿಸಲಾಗಿದ್ದು, ಅರ್ಕುಳದ ಹಾಲ್ವೊಂದರಲ್ಲಿ ಭಾನುವಾರ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳಿ ಆ್ಯಕ್ಟೀವಾದಲ್ಲಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಮಂಗಳೂರಿನ ಖಾಸಗೀ ಆಸ್ಪತ್ರಗೆ ಸ್ಥಳೀಯರು ರವಾನಿಸಿದ್ದಾರೆ. ಸ್ಕೂಟರ್ ಹಾಗೂ ಬಸ್ ಅತೀ ವೇಗದಲ್ಲಿ ಸಂಚಾರ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.