ಮಂಗಳೂರು, ಡಿ 08 (Daijiworld News/MB) : ರಾಷ್ಟ್ರೀಯ ಹೆದ್ದಾರಿ ೬೬ರ ಪಾವಂಜೆಯಲ್ಲಿ ಡಿಸೆಂಬರ್ 6ರ ಶುಕ್ರವಾರ ನಡೆದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಿನ್ನಿಗೋಳಿ ಬಳಿಯ ಕೊಡೆತ್ತೂರು ನಿವಾಸಿ ವಿಠಲ (೫೩) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯು ಮೂಲ್ಕಿಯಲ್ಲಿ ಟೈಲರ್ ಆಗಿದ್ದು, ಪಾವಂಜೆ ದೇವಸ್ಥಾನದಲ್ಲಿ ನಡೆಯುತ್ತಿರುವ ಯಕ್ಷಗಾನ ನೋಡಲೆಂದು ಆಗಮಿಸಿದ್ದರು. ಹಿಂದಿರುಗಿ ಹೋಗಲು ಬಸ್ ನಿಲ್ದಾಣಕ್ಕೆ ತೆರಳಲು ಹೆದ್ದಾರಿಯನ್ನು ದಾಟುತ್ತಿದ್ದಾಗ ಮುಂಬೈಯಿಂದ ಮಂಗಳೂರಿನಂತ ಸಂಚಾರ ಮಾಡುತ್ತಿದ್ದ ಸರಕು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು.
ಅಪಘಾತ ನಡೆದ ಬಳಿಕ ಹಲವು ವಾಹನಗಳು ಮೃತ ದೇಹದ ಮೇಲೆ ಸಂಚಾರ ಮಾಡಿದ್ದರ ಪರಿಣಾಮದಿಂದಾಗಿ ಮೃತ ದೇಹ ಸಂಪೂರ್ಣವಾಗಿ ಛಿದ್ರಗೊಂಡು ಶವದ ಗುರುತು ಹಚ್ಚಲು ಕಷ್ಟವಾಗಿತ್ತು.
ಡಿಕ್ಕಿ ಹೊಡೆದ ಲಾರಿಯನ್ನು ಪಣಂಬೂರು ಬಳಿ ಪತ್ತೆ ಹಚ್ಚಿ ಚಾಲಕನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಈ ಕುರಿತಂತೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.