ಜ 17: ರಾಜಸ್ಥಾನ ಜೋಧ್ ಪುರ ವಾಯುನೆಲೆಯಿಂದ ಸುಖೋಯ್ 30 ಯುದ್ಧ ವಿಮಾನದಲ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜ 17 ರ ಬುಧವಾರ ಹಾರಾಟ ನಡೆಸಿದರು. ಹೀಗಾಗಿ ಭಾರತದ 2ನೇ ಮಹಿಳೆ ಸುಖೋಯ್ ನಲ್ಲಿ ಹಾರಾಟ ನಡೆಸಿದಂತಾಗಿದೆ. ಇದಕ್ಕೂ ಮುಂಚೆ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಅಬ್ದುಲ್ ಕಲಾಂ ಕೂಡಾ ಸುಖೋಯ್ ಯಲ್ಲಿ ಹಾರಾಟ ನಡೆಸಿದ್ದರು. ಮಹಿಳಾ ಪೈಲಟ್ ಹಿಂಭಾಗದ ಸೀಟ್ ನಲ್ಲಿ ಕುಳಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸುಖೋಯ್ 30 ಯುದ್ಧ ವಿಮಾನ ಹಾರಾಟದ ಅನುಭವ ಪಡೆದರು.
ಇನ್ನು ಸುಖೋಯ್ ಯುದ್ದ ವಿಮಾನದ ಕಾರ್ಯಾಚರಣೆ ಹಾಗೂ ಶಕ್ತಿ ಸಾಮರ್ಥ್ಯದ ಪುನರ್ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಅವರು ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿರುವುದಾಗಿ ರಕ್ಷಣಾ ಇಲಾಖೆ ತಿಳಿಸಿದೆ.