ಕುಂದಾಪುರ ಜ 17: ಭಾರತೀಯ ಜನತಾ ಪಾರ್ಟಿ, ಉಡುಪಿ ಜಿಲ್ಲಾ ಮೀನುಗಾರರ ಪ್ರಕೋಷ್ಠ ಉಡುಪಿ ಇವರ ನೇತೃತ್ವದಲ್ಲಿ ಜ.21ಭಾನುವಾರ ಅಪರಾಹ್ನ 3ಕ್ಕೆ ಕುಂದಾಪುರ ಕೋಡಿ ರಸ್ತೆಯ ಕಿನತಾ ಬೀಚ್ನಲ್ಲಿ ’ಮತ್ಸ್ಯ ಸಂಗಮ-2018’ ಎನ್ನುವ ವಿಶಿಷ್ಠ ಕಾರ್ಯಕ್ರಮ ನಡೆಯಲಿದೆ. ಮತ್ಸ್ಯ ಸಂಗಮದ ಅಂಗವಾಗಿ ಪುರುಷರಿಗೆ ಉಡುಪಿ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ, ಮೀನು ಹಿಡಿಯುವ ಸ್ಪರ್ಧೆ, ಮರಳುಶಿಲ್ಪ ರಚನಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ(ಸಮುದ್ರ ಮತ್ತು ಮೀನುಗಾರಿಕೆ). ಸಾಂಪ್ರಾದಾಯಿಕ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಹಿರಿಯ ಮೀನುಗಾರರಿಗೆ ಸನ್ಮಾನ ನಡೆಯಲಿದೆ.
ವೈವಿಧ್ಯತೆಯಲ್ಲಿ ವಿವಿಧತೆ ಸಾರುವ ವಿವಿಧ ಬಗೆಯ ಮೀನಿನ ಖಾದ್ಯಗಳು, ಅಲಂಕೃತ ಮೀನು ಪ್ರದರ್ಶನ, ಮತ್ತು ಮಾರಾಟ, ರಾಜ್ಯ ಪ್ರಶಸ್ತಿ ಪುರಸ್ಕೃತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ, ಮಜಾ ಟಾಕೀಸು ಕಲಾವಿದರಿಂದ ನಗೆ ಹಬ್ಬ, ವಿಶೇಷ ಆಕರ್ಷಣೆಯಾಗಿ ಮುಂಗಾರು ಮಳೆ ಚಲನಚಿತ್ರ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 4000ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ರಾತ್ರಿ 10.30ರ ತನಕ ಮತ್ಸ್ಯ ಸಂಗಮ ಕಾರ್ಯಕ್ರಮ ನಡೆಯುತ್ತದೆ ಎಂದು ಮೀನುಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸದಾನಂದ ಬಳ್ಕೂರು ತಿಳಿಸಿದರು.
ಈ ಸಂದರ್ಭ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕೋಷ್ಠಗಳ ಪ್ರಭಾರಿ ಸುಪ್ರಸಾದ್ ಶೆಟ್ಟಿ ಬೈಕಾಡಿ, ಜಿ.ಪಂ.ಸದಸ್ಯರಾದ ಶ್ರೀಲತಾ ಸುರೇಶ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಬಿಜೆಪಿ ಪರಿಷತ್ ಸದಸ್ಯ ಮೋಹನದಾಸ ಶೆಣೈ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ತಾ.ಪಂ.ಅಧ್ಯಕ್ಷ ಜಯಶ್ರೀ ಮೊಗವೀರ, ಶಂಕರ ಪುತ್ರನ್ ಕೋಟ, ಗೀರಿಶ್ ಸಾಲ್ಯಾನ್, ನಾರಾಯಣ ಬಿಲ್ಲವ, ಮನೋಹರ್ ಕುಂದರ್, ದಿನೇಶ ಕೋಟ್ಯಾನ್, ಸಂತೋಷ ಮೊಗವೀರ, ಪ್ರದೀಪ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.