ಸುಳ್ಯ ಜ 17 : ಗೋಹತ್ಯೆ ನಿಷೇಧ ಮಾಡುವಂತೆ ಮತ್ತು ರಾಮಜನ್ಮ ಭೂಮಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡುವಂತೆ, ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಬಿ.ಜೆ.ಪಿಯವರಿಂದಲೇ ಪ್ರವೀಣ್ ಬಾಯಿ ತೊಗಡಿಯ ಅವನ್ನು ಎನ್ ಕೌಂಟರ್ ಮಾಡಿ ಕೊಲೆ ಮಾಡುವ ಯತ್ನ ನಡೆದಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಯಂ.ವೆಂಕಪ್ಪ ಗೌಡ ಆರೋಪ ಮಾಡಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ವಿಷಯವನ್ನು ಮಾದ್ಯಮದವರ ಮುಂದೆ ಸ್ವಂತ ಪ್ರವೀಣ್ ಬಾಯಿ ತೊಗಡಿಯ ಹೇಳಿಕೊಂಡಿದ್ದಾರೆ. ಇದು ಟಿ.ವಿ ಮಾದ್ಯಮದಲ್ಲಿ ವರದಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಬಿ.ಜೆ.ಪಿ ಹಿಂದುಗಳಿಗೂ ಸುರಕ್ಷಿತ ಪಕ್ಷವಲ್ಲ, ಬಿ.ಜೆ.ಪಿಯವರು ಆತ್ಮವಲೋಕನ ಮಾಡಿಕೊಳ್ಳುವ ಅಗತ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ್,ಕಾಂಗ್ರಸಿಗರಾದ ಸುರೇಶ್ ಉಬರಡ್ಕ,ಸುಧೀರ್ ರೈ ಮೇನಾಲ,ಶರೀಫ್ ಕಂಠಿ ಇತರರು ಉಪಸ್ಥಿತರಿದ್ದರು.