ಕಾಸರಗೋಡು, ಡಿ 06 (Daijiworld News/MSP): ಕೆಎಸ್ಆರ್ ಟಿ ಸಿ ಬಸ್ಸು ಚಾಲಕರೋರ್ವರು ಡಿಪೋದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ನೀಲೇಶ್ವರ ಪಳ್ಳಿಕೆರೆಯ ಪಿ . ವಿ ಸುಕುಮಾರನ್ (48) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ರಾತ್ರಿ ಕಾಸರಗೋಡು ಕೆಎಸ್ಆರ್ ಟಿಸಿ ಡಿಪೋ ದ ಒಂದನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಇದನ್ನು ಗಮನಿಸಿದ ಉಳಿದ ಸಿಬಂದಿಗಳು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ವೇತನ ಮೊಟಕು ಗೊಂಡಿರುವುದೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇವರ ತಂದೆ ಕೆಲ ದಿನಗಳ ಹಿಂದೆ ನಿಧನರಾಗಿದ್ದು , 20 ದಿನಗಳ ರಜೆಯಲ್ಲಿ ತೆರಳಿ ಗುರುವಾರ ರಾತ್ರಿಯಷ್ಟೇ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.