ಪುತ್ತೂರು, ಡಿ 06 (Daijiworld News/MB) : ಕೃಷಿಬೆಳೆಗಳಿಗೆ ಹಾನಿ ಮಾಡುವ ಕಾಡುಪ್ರಾಣಿಗಳಿಗೆ ಹತ್ಯೆ ಮಾಡಲು ಸ್ಪೋಟಕ ವಸ್ತು ತಂದು ಮನೆಯಲ್ಲೇ ಕಚ್ಚಾ ಸ್ಪೋಟಕ ತಾಯಾರಿ ಮಾಡುವ ವೇಳೆ ಸ್ಪೋಟಕ ಸಿಡಿದು ಒಬ್ಬರು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಬೆಟ್ಟಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬೆಟ್ಟಂಪಲ್ಲಿ ಗ್ರಾಮ ನಿವಾಸಿ ಕೇಪುಗೌಡ (85 ವರ್ಷ) ಎಂಬವರ ಪುತ್ರ ಬಾಲಕೃಷ್ಣ (54 ವರ್ಷ) ಎಂಬವರಿಗೆ ಗಂಭೀರ ಗಾಯವಾಗಿದ್ದು ಅವರ ನಾದಿನಿ ವೇದಾವತಿ ಹಾಗೂ ಅವರ ಇಬ್ಬರು ಮಕ್ಕಳಾದ ಕಾರ್ತಿಕ್ ಮತ್ತು ಮೋನಿಶಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಗಂಭೀರ ಗಾಯಾಗೊಂಡ ಬಾಲಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಉಳಿದವರನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.