ಮಂಗಳೂರು ಜ 17: ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಅದೇಶ ಅನುಸಾರ, ಹಜ್ ಯಾತ್ರಿಕರಿಗೆ ನೀಡುವ ಸಬ್ಸಿಡಿ ರದ್ದುಗೊಳಿಸಿದ ಕ್ರಮವನ್ನು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ್ ಶ್ಲಾಘಿಸಿದ್ದಾರೆ. ಅವರು ಜ 17 ರ ಬುಧವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿವರ್ಷ ಹಜ್ ಯಾತ್ರಿಕರಿಗೆ ನೀಡುವ ಸಬ್ಸಿಡಿಗೆ ಸುಮಾರು 750 ಕೋಟಿ ರುಪಾಯಿ ವೆಚ್ಚ ಮಾಡುತ್ತಿತ್ತು. ಈ ಹಿಂದೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯಿಂದ ಹಜ್ ಯಾತ್ರಾರ್ಥಿಗಳಿಗೆ ವೈಯಕ್ತಿಕ ಲಾಭ ಪಡೆಯುತ್ತಿರಲಿಲ್ಲ. ಇದರಿಂದ ಏರ್ ಇಂಡಿಯಾ ಕಂಪನಿ ಮಾತ್ರ ಇದರ ಲಾಭವನ್ನು ಪಡೆಯುತ್ತಿತ್ತು ಎಂದರು. ಸಮಾಜದಲ್ಲಿ ಜನರ ಮದ್ಯೆ ಸಂಶಯ ಮೂಡಿಸುವ ಕಾರ್ಯ ಯಾವುದೇ ಸರ್ಕಾರದಿಂದ ಆಗಬಾರದು , ಸಬ್ಸಿಡಿ ಕಡಿತದಿಂದ ವೈಯಕ್ತಿಕವಾಗಿ ಯಾರಿಗೂ ಲಾಭ ಅಥವಾ ನಷ್ಟ ಇಲ್ಲ, ಯಾತ್ರಾರ್ಥಿಗಳು ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಂಬಿ ಯಾತ್ರೆಗೆ ತೆರಳುತ್ತಿರಲಿಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದೆಯಷ್ಟೇ ಎಂದರು.
ಇದೇ ವೇಳೆ ಇಂದಿರಾ ಕ್ಯಾಂಟೀನ್ ಜಿಲ್ಲೆಯಲ್ಲಿ ಯಾವಾಗ ಆರಂಭ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ, ಉತ್ತಮ ಕೆಲಸಕ್ಕೆ ಅಡೆತಡೆ ಬರೋದು ಸಾಮಾನ್ಯ, ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ಸನಿಹದ ಖಾಸಗಿ ಹೊಟೇಲ್ ಗಳ ಮಾಫಿಯಾದಿಂದ ಅಡೆತಡೆ ಬರುವುದು ಸಾಮಾನ್ಯ, ಆದರೂ ತಿಂಗಳಾಂತ್ಯದ ಒಳಗೆ ಇಂದಿರಾ ಕ್ಯಾಟೀನ್ ಪ್ರಾರಂಭವಾಗಲಿದೆ ಎಂದರು.
ಇದೇ ವೇಳೆ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮಧು, ಸುದರ್ಶನ್ ಶೆಟ್ಟಿ, ಪಿಯೂಸ್ ಮೊಂತೇರೋ,ಮುಂತಾದವರು ಉಪಸ್ಥಿತರಿದ್ದರು.