ಉಡುಪಿ, ಡಿ 05 (DaijiworldNews/SM): ಮೀನುಗಾರಿಕಾ ಇಲಾಖೆಯು ಮೀನುಗಾರಿಕಾ ಬೋಟ್ಗಳಿಗೆ ಒಂದು ಟ್ರ್ಯಾಕಿಂಗ್ ಡಿವೈಸ್ ನ್ನು ಅಳವಡಿಸಲು ಜಿಲ್ಲಾ ಮಟ್ಟದ ಭದ್ರತಾ ಸಮಿತಿಯೊಂದಿಗೆ ಚಿಂತನೆ ನಡೆಸಿದೆ. ಇದರಿಂದ ಕಾರ್ಯನಿರತ ಬೋಟ್ಗಳು, ಅಥವಾ ಜಿಯೋ ಫೆನ್ಸಿಂಗ್ನಿಂದ ಒಳಗೆ ಅಥವಾ ಹೊರಗೆ ಹೋಗುವ ಮಾಹಿತಿಗಳನ್ನು ಪತ್ತೆ ಹಚ್ಚಬಹುದು. ಇದೀಗ ಉಡುಪಿಯ ಬಂದರಿನಲ್ಲಿ ಸುಮಾರು 1400 ಬೋಟುಗಳು ಇವೆ. ಇದರಿಂದ ದೋಣಿಗಳ ಹಾಜರಾತಿಯ ವಿವರ ಸಿಗುತ್ತದೆ.
ಸದ್ಯಕ್ಕೆ ಈ ಟ್ರಾಕಿಂಗ್ ಡಿವೈಸ್ ನ್ನು ಎರಡು ದೋಣಿಗಳಿಗೆ ಟ್ರಯಲ್ ಆಂಡ್ ಎರರ್ ಪ್ರಯೋಗಾತ್ಮಕವಾಗಿ ಅಳವಡಿಸಲಾಗಿದ್ದು, ಒಳ್ಳೆಯ ಫಲಿತಾಂಶ ಕೂಡ ಸಿಕ್ಕಿದೆ ಎಂದು ಮೀನುಗಾರಿಕಾ ಇಲಾಖೆಯ ಡಿಡಿ ಗಣೇಶ್ ಕೆ ಅವರು ದಾಯ್ಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಇಲಾಖೆಯು ಬೋಟುಗಳ ಚಲನವಲನ, ಹಾಜರಾತಿ ಬಗ್ಗೆ ನಿಖರವಾದ ಮಾಹಿತಿ ಕೇಳಿದಾಗ ಕೊಡುವುದು ಕಷ್ಟವಾಗುತ್ತಿತ್ತು. ಆಗ ಈ ರೀತಿಯ ಡಿವೈಸ್ ನ್ನು ಡಿಸೈನ್ ಮಾಡುವ ಚಿಂತನೆ ನಡೆಸಲಾಯಿತು.
ಫ್ರೋ ಟ್ರಾಕಿಂಗ್, ವೆಬ್ ಪೋರ್ಟಲ್ ಮುಖಾಂತರ ಈ ದೋಣಿಗಳ ಚಲನವಲನಗಳನ್ನು ಕಂಡು ಹಿಡಿಯಬಹುದು. ಈ ವೆಬ್ ಎಕ್ಸೆಸ್ ಪೋರ್ಟಲ್ ನಲ್ಲಿ ಲೋಗ್ ಇನ್ ಮಾಡಿದರೆ ಇದನ್ನು ಗಮನಿಸಬಹುದು. ಎಲ್ಲಾದರೂ ದುರುಪಯೋಗ ಅಥವಾ ನಿಯಮ ಉಲ್ಲಂಘನೆಯಾದಲ್ಲಿ ಅವುಗಳ ಮಾಹಿತಿ ಕೂಡ ಲಭಿಸುತ್ತದೆ.
ಸದ್ಯಕ್ಕೆ ಪ್ರಯೋಗಾತ್ಮಕವಾಗಿ ನಡೆಸಿದ ದೋಣಿಯು 28 ಕಿ.ಮೀ. ದೂರ ಚಲಿಸಿರುವುದನ್ನು ಟ್ರಾಕ್ ಮಾಡಲಾಗಿದೆ. ಅಲ್ಲದೆ ಇದರಲ್ಲಿ ಪ್ಯಾನಿಕ್ ಬಟನ್ ಕೂಡ ಅಳವಡಿಸಲಾಗಿದೆ. ಸದ್ಯಕ್ಕೆ ಅಡೆಲ್ಫಿ ಟೆಕ್ನಾಲಜಿಯವರು ಇದನ್ನು ಅಭಿವೃದ್ಧಿ ಪಡೆಸಿದ್ದಾರೆ. ಅಲ್ಲದೆ, ದೋಣಿಯ ಮಾಲಕರು ಕೂಡ ತಮ್ನ ದೋಣಿಯ ಚಲನೆಯನ್ನು ನೋಡಬಹುದು.
ಹಿಂದೆ ಮೀನುಗಾರಿಕಾ ದೋಣಿಯಲ್ಲಿ ವಾಕಿ ಟಾಕಿ, ಟ್ರಾನ್ಸ್ ಪೌಂಡರ್ ಗಳನ್ನು ಬಳಸಲಾಗುತ್ತಿತ್ತು. ಆದರೆ ಇದರಿಂದ ವನ್ ವೇ ಮೆಸೇಜ್ ಮಾತ್ರ ಹೋಗುತ್ತಿತ್ತು. ಅಲ್ಲದೆ ಸ್ವಲ್ಪ ದುಬಾರಿಯೂ ಆಗಿತ್ತು. ಆದರೆ ಇದರಲ್ಲಿ ಮೊಬೈಲ್ ಮೆಸೇಜ್ ಗೆ ರಿಪ್ಲೈ ಕೂಡ ಮಾಡಬಹುದು. ಅಲ್ಲದೆ ಈ ಡಿವೈಸ್ ನಲ್ಲಿ ಬೇರೆ ಬಂದರಿನಿಂದ ಗಡಿ ದಾಟಿ ಬಂದ ದೋಣಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.