ಕಾಸರಗೋಡು, ಡಿ 05 (DaijiworldNews/SM): ಸೇತುವೆ ಉದ್ಘಾಟನೆಗೆ ಹಾಕಲಾಗಿದ್ದ ದ್ವಾರದಲ್ಲಿದ್ದ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ರವರ ಭಾವಚಿತ್ರಕ್ಕೆ ಬಣ್ಣ ಬಳಿದ ಘಟನೆ ಕಾಸರಗೋಡು ಪೆರಿಯದಲ್ಲಿ ನಡೆದಿದೆ.
ರಾಜಕೀಯ ವಿರೋಧಿಗಳು ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. ರಾಜ್ಯದ ಅತೀ ಎತ್ತರದ ಸೇತೆವೆಯಾಗಿರುವ ಆಯಂಕದವು ಸೇತುವೆಯ ಲೋಕಾರ್ಪಣೆ ಡಿಸೆಂಬರ್ ಎಂಟರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಲಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ, ರಾಜ್ಯದ ಸಚಿವರು, ಸ್ಥಳೀಯ ಶಾಸಕರ ಭಾವಚಿತ್ರವನ್ನು ಒಳಗೊಂಡ ದ್ವಾರವನ್ನು ಹಾಕಲಾಗಿತ್ತು.
ಆದರೆ ಕಾಂಗ್ರೆಸ್ ಸಂಸದರಾಗಿರುವ ರಾಜ್ ಮೋಹನ್ ಉಣ್ಣಿತ್ತಾ ನ್, ಭಾವ ಚಿತ್ರಕ್ಕೆ ಬಣ್ಣ ಹಚ್ಚಿ ವಿಕ್ರತಗೊಳಿಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ಕೇಳಿಬರುತ್ತಿದೆ.
ಇನ್ನು ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ನನ್ನ ಭಾವಚಿತ್ರಕ್ಕೆ ಹಾನಿ ಎಸಗಿದರೂ ಜನರ ಮನಸ್ಸಿನಿಂದ ನನ್ನನ್ನು ದೂರ ಮಾಡಲು ಯಾವ ರಾಜಕೀಯ ವಿರೋಧಿಗಳಿಗೂ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.