ಮಂಗಳೂರು, ಡಿ 05 (Daijiworld News/MB): ಈರುಳ್ಳಿ ದರ ನಿಯಂತ್ರಿಸಲಾಗದ ಕೇಂದ್ರ ಸರಕಾರದ ವಿರುದ್ದ ದುಬಾರಿಯಾದ ಈರುಳ್ಳಿ ದರಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರು ಹಾಗೂ ಕಾರ್ಮಿಕರ ರಕ್ಷಣೆಗೆ ಒತ್ತಾಯಿಸಿ ಗುರವಾರ ಬಂದರು ಶ್ರಮಿಕ ಸಂಘ ಕಾರ್ಮಿಕರ ಕಟ್ಟೆ ಎದುರು ಈರುಳ್ಳಿ ಕಟ್ಟಿದ ನೇಣು ಹಗ್ಗ ಪ್ರದರ್ಶಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತಾನಾಡಿದ ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್ ಈರುಳ್ಳಿ ದರ ದೇಶದಲ್ಲಿ ಐದಾರು ತಿಂಗಳ ಹಿಂದೆ ಕೆಲ ರಾಜ್ಯಗಳಲ್ಲಿ ನಡೆದ ಪ್ರಕೃತಿ ವಿಕೋಪದಿಂದ ನಿಯಂತ್ರಣಕ್ಕೂ ಮೀರಿ ಏರಿಕೆಯಾಗಿದೆ. ಹಾಗಾಗಿ ಮಂಗಳೂರಿಗೆ ಈರುಳ್ಳಿ ದರ ಸರಬರಾಜು ಆಗುತ್ತಿಲ್ಲ. ಮಧ್ಯವರ್ತಿಗಳು ದರ ಏರಿಕೆಯ ಲಾಭ ಪಡೆಯುತ್ತಿದ್ದಾರೆ. ಏರಿಕೆ ದರ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಕೇಂದ್ರ ಸಚಿವರೊಬ್ಬರು ಇತ್ತೀಚೆಗೆ ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಿ ಈರುಳ್ಳಿ ದರದಲ್ಲಿ ಇಳಿಕೆ ಕಾಣಲಿದೆ. ಟರ್ಕಿ, ಈಜಿಪ್ಟ್ನಿಂದ ೧೧ ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಲಾಗಿದೆ ಎಂದು ಹೇಳಿದ್ದರು ಆದರೆ ಆ ನಿರೀಕ್ಷೆ ಸುಲ್ಳಾಗಿದ್ದು ಈರುಳ್ಳಿ ದರದಲ್ಲಿ ಏರಿಕೆಯಾಗಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಆಮದು ಹಾಗೂ ರಫ್ತಿನಲ್ಲಿ ನಿಯಂತ್ರಣ ಇದಿದ್ದರೆ ಇಂತಹ ಸಂಕಷ್ಟದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಅಧೀನ ಇಲಾಖೆಗಳು ಈರುಳ್ಳಿ ದರ ಇಳಿಕೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು ಅವರ ರಕ್ಷಣೆಯಾಗುತ್ತಿಲ್ಲ. ನಷ್ಟದಿಂದ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ ಎಂದರು.
ಹಾಗೆಯೇ ದೇಶದಲ್ಲಿ ಉತ್ಪದನಾ ಕ್ಷೇತ್ರಗಳು ಮುಚ್ಚಿಹೋಗುತ್ತಿದ್ದು, ನಿರುದ್ಯೋಗ ಸಮಸ್ಯೆ ದಿನಕಳೆದಂತೆ ವಿಪರೀತವಾಗಿ ಏರಿಕೆಯಾಗುತ್ತಿದೆ. ಯುವಕರು ಅಪರಾಧದಂತ ಆಕರ್ಷತಿರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಆಡಳಿತಕ್ಕೆ ಬರುವ ಮೊದಲು ಪ್ರಧಾನಿ ಮೋದಿ ನೇತೃತ್ವದ ಸರಕಾರ ಭರವಸೆಗಳನ್ನು ನೀಡಿದ್ದು ಆ ಭರವಸೆಗಳೆಲ್ಲಾ ಸುಳ್ಳಾಗಿದೆ. ಮೋದಿಯವರ ಆರು ವರ್ಷದ ಆಡಳಿತವಾಧಿ ಕಳಪೆಯಾಗಿದ್ದು ಈರುಳ್ಳಿ ದರ ೨೦೦ರತ್ತ ಜಿಗಿಯುತ್ತಿದೆ. ಇದೇನಾ ನಿಮ್ಮ ಅಚ್ಛೇ ದಿನ್ ರಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಖಜಾಂಚಿ ಹರೀಶ್ ದೇರೆಬೈಲ್, ಕಾರ್ಮಿ ಮುಖಂಡರಾದ ಯಲ್ಲಪ್ಪ್, ಹಂಝ, ಶರೀಫ್, ಸಮೀರ್ ಉಮರ್ ಫಾರೂಕ್ ಮೊದಲಾದವರು ಉಪಸ್ಥಿತಿ ಇದ್ದರು.