ಬೆಳ್ತಂಗಡಿ, ಡಿ 05 (Daijiworld News/MB): ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಇಲಾಖೆಗಳ ವತಿಯಿಂದ ೩೪೭ಕೋಟಿರೂಪಾಯಿಯಅಭಿವೃದ್ಧಿ ಕಾಮಗಾರಿಗಳಿಗೆ ಡಿ. ೮ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆಕ್ರೀಡಾಂಗಣದಲ್ಲಿ ಶಿಲಾನ್ಯಾಸಗೊಳಿಸುವ ಮೂಲಕ ಚಾಲನೆಗೊಳಿಸಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಬುಧವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತಾನಾಡಿ, ಬೆಳ್ತಂಗಡಿ ತಾಲೂಕು ಹಲವಾರು ಸಮಸ್ಯೆಗಳ ಮಧ್ಯೆ ಬೆಳೆಯುತ್ತಿರುವ ತಾಲೂಕಾಗಿದೆ. ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆ ಮತ್ತುಅವರ ಆಶಯಕ್ಕೆ ತಕ್ಕಂತೆ ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಜನತೆಯ ಆಶೋತ್ತರಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಈ ಹಿಂದೆ ತಾಲೂಕಿಗೆ ತಂದಿರುವ 102 ಕೋಟಿ ಅನುದಾನದ ಜೊತೆಗೆ ಈಗ ಹೊಸದಾಗಿ 347 ಕೋಟಿರೂಪಾಯಿಯ ಅನುದಾನವನ್ನು ತಂದಿದ್ದು, ಮುಖ್ಯಮಂತ್ರಿ ಸೇರಿದಂತೆರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರುಗಳು ಬೇಡಿಕೆಗೆ ಪೂರಕವಾಗಿ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ್ದಾರೆ’ಎಂದರು.
ತಾಲೂಕಿನ ೮೧ ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳು ಸೇರಿದಂತೆ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಸಣ್ಣ ನೀರಾವರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ಸಮಗ್ರಅಭಿವೃದ್ಧಿಯ ಯೋಜನೆಗಳನ್ನು ತರಲಾಗಿದ್ದು ಸುವ್ಯವಸ್ಥೆಯ ದೃಷ್ಠಿಯಿಂದ ಉಜಿರೆ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳು ನಡೆಸುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ೨೫ ಸಾವಿರ ಜನ ಭಾಗವಹಿಸಲಿದ್ದು, ಇದೊಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ ರೀತಿಯ ಕಾರ್ಯಕ್ರಮವಾಗಲಿದೆ. ತಾಲೂಕಿನಅಭಿವೃದ್ಧಿಯ ಉದ್ದೇಶದಿಂದ ಶ್ರಮಿಕನಾಗಿ-ಸೇವಕನಾಗಿ ತಾನುದುಡಿಯುತ್ತಿದ್ದೇನೆ ಎಂದು ತಿಳಿಸಿದರು.
ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ, ಸಚಿವರಾದ ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಸಂಸದ ನಳಿನ್ ಕುಮಾರ್ಕಟೀಲ್,ವಿಧಾನಪರಿಷತ್ ಸದಸ್ಯಆಯನೂರು ಮಂಜುನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಶಿಲಾನ್ಯಾಸಗೊಳ್ಳಲಿರುವ ಕಾಮಗಾರಿಗಳು-ಬಿಡುಗಡೆಯಾದ ಅನುದಾನ
ಲೋಕೋಪಯೋಗಿ ಇಲಾಖೆಯ 126 ಕಾಮಗಾರಿಗಳಿಗೆ 78.53 ಕೋ.ರೂ., ಪಂಚಾಯತ್ರಾಜ್ ಇಲಾಖೆಯ 306 ಕಾಮಗಾರಿಗಳಿಗೆ 96 ಕೋಟಿ, ಸಣ್ಣ ನೀರಾವರಿ ಮತ್ತುಅಂತರ್ಜಲ ಯೋಜನೆಯಲ್ಲಿ 27 ವೆಂಟೆಡ್ಡ್ಯಾಮ್ (ಬಸ್,ಲಾರಿ ಹೋಗುವ ರೀತಿಯ ಸೇತುವೆ) ಹಾಗೂ ಸೇತುವೆಗಳಿಗೆ ೧೨೬ ಕೋ.ರೂ., ಧಾರ್ಮಿಕ ದತ್ತಿಇಲಾಖೆಯ 6 ಕಾಮಗಾರಿಗಳಿಗೆ 1.15 ಕೋಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ 32 ಕಾಮಗಾರಿಗಳಿಗೆ ೮೧ ಲಕ್ಷ, ಪೌರಾಡಳಿತ ಇಲಾಖೆಯ ಕಾಮಗಾರಿಗಳಿಗೆ 10 ಕೋಟಿ, 5.50 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆಯಡಿ ವಾರಾಹಿ ಪ್ರಾಜೆಕ್ಟ್ ೨.೫೦ ಕೋ.ರೂ ಸೇರಿದಂತೆ ಇನ್ನಿತರ ಇಲಾಖೆಯ ಅನುದಾನ ಸಹಿತ ೩೪೭ ಕೋಟಿರೂ.ನ ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಕ, ಮಮತಾ ಶೆಟ್ಟಿ, ಸೌಮ್ಯಲತಾ, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಸದಸ್ಯ ಕೃಷ್ಣಯ್ಯಆಚಾರ್, ಅಂಡಿಂಜೆ ಗ್ರಾಪಂ ಅಧ್ಯಕ್ಷ ಮೋಹನ್ ಅಂಡಿಂಜೆ, ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಸೀತಾರಾಮ ಬೆಳಾಲ್ ಮತ್ತು ಪ್ರಭಾಕರ ಶೆಟ್ಟಿ ಉಪ್ಪಡ್ಕ ಇದ್ದರು.