ಮೂಡುಬಿದಿರೆ, ಡಿ 4 (Daijiworld News/ MB) : ದಲಿತ ಮಹಿಳೆ ಎಂಬ ಕಾರಣಕ್ಕೆ ಕರ್ತವ್ಯ ನಿರತ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಹಾಕಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ಇಲ್ಲಿನ ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರ ಕಳುಹಿಸಲಾಗಿದೆ.
ಈ ದೇವಸ್ಥಾನ ಮುಜರಾಯಿ ಇಲಾಖೆಯ ಅಡಿಯಲ್ಲಿದ್ದು ಕಳೆದ ಸೋಮವಾರ ಷಷ್ಠಿ ಮಹೋತ್ಸವ ಈ ದೇವಸ್ಥಾನದಲ್ಲಿ ನಡೆದಿದ್ದು ಸಾವಿರಾರು ಭಕ್ತರು ಆಗಮಿಸುತ್ತಿದ್ದರಿಂದ ಪೊಲೀಸ್ ಇಲಾಖೆ ದೇವಸ್ಥಾನಕ್ಕೆ ಭದ್ರತೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಆ ಸಂದರ್ಭದಲ್ಲಿ ಈ ಮಹಿಳಾ ಪೊಲೀಸ್ ಪೇದೆಯು ಅಲ್ಲಿ ಕಾರ್ಯನಿರತರಾಗಿದ್ದು ಮಹಿಳಾ ಪೇದೆ ದಲಿತೆ ಎಂಬ ಕಾರಣಕ್ಕೆ ಅಲ್ಲಿನ ದೇವಸ್ಥಾನ ಅರ್ಚಕ ಮಂಡಳಿಯವರು ಕೂಡಲೇ ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ನಿಮ್ಮನ್ನು ಯಾರು ಈ ದೇವಸ್ಥಾನದ ಒಳಗೆ ಬಿಟ್ಟುಕೊಂಡಿದ್ದು ? ನೀವು ದೇವಸ್ಥಾನದ ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ಕಾರ್ಯನಿರ್ವಹಿಸಿ, ನೀವು ಒಳಗೆ ಬಂದಿದ್ದರಿಂದ ದೇವಸ್ಥಾನ ಮೈಲಿಗೆಯಾಗಿದೆ ಎಂದು ಅವಮಾನ ಮಾಡಿ ದೇವಸ್ಥಾನದಿಂಧ ಹೊರ ಹಾಕಿದ್ದಾರೆ.
ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಪೊಲೀಸ್ ಮಹಿಳಾ ಪೇದೆಯನ್ನು ಹೊರಹಾಕಿದ್ದನ್ನು ಪ್ರಶ್ನಿಸಿದ್ದು ಆದರೂ ಅರ್ಚಕ ಸಿಬ್ಬಂದಿಯವರನ್ನು ಹೊರ ಕಳುಹಿಸಿದ್ದಾರೆ. ಭೋಜನ ಸ್ಥಳದಲ್ಲೂ ತಾರತಮ್ಯ ಮಾಡಿದ್ದು ಎಲ್ಲರ ಸಿಟ್ಟಿಗೆ ಕಾರಣವಾಗಿದೆ.
ದೇವಸ್ಥಾನದ ಪೂಜೆ ನಡೆದ ಬಳಿಕ ಬ್ರಾಹ್ಮಣ ಸಮುದಾಯದವರಿಗೆ ಪ್ರತ್ಯೇಕ ಭೋಜನಾ ವ್ಯವಸ್ಥೆ ಮಾಡಿ, ಅವರು ಊಟ ಮಾಡಿದ ನಂತರವೇ ಉಳಿದ ಸಮುದಾಯದ ಭಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಶಾಂತಿ ಕಾಪಾಡುವ ಉದ್ದೇಶದಿಂದ ನಿಯೋಜಿನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಮಾಡಿದ ಅವಮಾನದಿಂದಾಗಿ ಬೇಸರಗೊಂಡ ಎಲ್ಲಾ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯವರು ಸ್ಥಳೀಯ ಹೋಟೆಲ್ ನಲ್ಲಿ ಊಟ ಮಾಡಿದರು.
ದೇವಸ್ಥಾನದಲ್ಲಿ 10 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು, ದಲಿತ ಮಹಿಳಾ ಪೇದೆಯನ್ನು ಹೊರಹಾಕಿದ್ದರಿಂದ ಆಕ್ರೋಶಗೊಂಡ ಭಕ್ತರು ದೇವಸ್ಥಾನದ ಊಟ ಸೇವಿಸದೇ ಅವರವರ ಮನೆಗಳಲ್ಲಿ ಊಟ ಮಾಡಿದ್ದಾರೆ.