ಬೆಳ್ತಂಗಡಿ, ಡಿ 4 (Daijiworld News/MSP): ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಾಜೂರಿನಲ್ಲಿ ವಿಶೇಷವಾಗಿ ವಿವಾಹವೊಂದು ನೆರವೇರಿದೆ. ನದಿಯ ತಟದಲ್ಲಿ ಕಾಜೂರು ದರ್ಗಾ ಇದ್ರೆ - ಆ ತಟದಲ್ಲಿ ಕೊಲ್ಲಿಯ ಶ್ರೀ ದುರ್ಗಾದೇವಿ ದೇವಸ್ಥಾನ ಇದೆ. ಕಾಜೂರು ದರ್ಗಾ ಮತ್ತು ದುರ್ಗಾದೇವಿಯ ದೇವಸ್ಥಾನ ಅಪರೂಪದ ವಿವಾಹಕ್ಕೆ ಸಾಕ್ಷಿಯಾಯಿತು.
ಕಾಜೂರಿನ ತುಂಗಪ್ಪ ಪೂಜಾರಿ ಮತ್ತು ದೇವಕಿ ದಂಪತಿ ಪುತ್ರ ಅವಿನಾಶ್ ಹಾಗೂ ಮಂಗಳೂರಿನ ಜೆಪ್ಪು ವಿಶ್ವನಾಥ ಎಂಬುವವರ ಪುತ್ರಿ ಕೌಶಿಕಾ ಅವರ ವಿವಾಹ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನೆರವೇರಿತು. ಆದರೆ ವಿವಾಹದ ಔತಣಕೂಟವಿದ್ದೂ ಮಾತ್ರ ನದಿಯಾಚೆ ದಡದಲ್ಲಿರುವ ಕಾಜೂರು ದರ್ಗಾದಲ್ಲಿ ವಠಾರದಲ್ಲಿ ಹಾಕಲಾಗಿದ್ದ ಪೆಂಡಾಲ್ನಲ್ಲಿ.
ದೇವಸ್ಥಾನದಲ್ಲಿ ಸಪ್ತಪದಿ ತುಳಿದರೆ, ನವ ವಧು-ವರರು ಬಂಧುಮಿತ್ರರೆಲ್ಲರೂ ಸೇರಿ ಮಸೀದಿಯ ಮಠಾರದಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಭಾಗಿಯಾಗಿ ಸಾಮರಸ್ಯ ಜೀವನದ ಸಂದೇಶ ಸಾರಿದರು.