ಮಂಜೇಶ್ವರ, ಡಿ 4 (Daijiworld News/MSP): ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಡಿ. 03ರ ಮಂಗಳವಾರ ರಾತ್ರಿ ಉಪ್ಪಳ ಪೇಟೆಯಲ್ಲಿ ನಡೆದಿದೆ.
ಉಪ್ಪಳ ನಿವಾಸಿ ಮುಸ್ತಫಾ ದಾಳಿಗೊಳಗಾದ ಯುವಕ. ಈತ ಮಂಗಳವಾರ ರಾತ್ರಿ 11 ಘಂಟೆ ಸುಮಾರಿಗೆ ಜಿಮ್ ಗೆ ತೆರಳಿ ವಾಪಾಸು ಬರುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ಕಾರಿನಲ್ಲಿ ಬಂದ ತಂಡವು ಉಪ್ಪಳ ಪೇಟೆಯಲ್ಲಿ ಮುಸ್ತಫಾರನ್ನು ತಡೆದು ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.
ದಾಳಿಯಿಂದ ಗಂಭೀರ ಗಾಯಗೊಂಡ ಮುಸ್ತಫಾರನ್ನು ತಕ್ಷಣ ಉಪ್ಪಳದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.