Karavali
ಕುಂದಾಪುರ: ಬೃಹತ್ ಧರಣಿ - ಡಿ.31ಕ್ಕೆ ಕಪ್ಪು ಪಟ್ಟಿ ಧರಿಸಿ ಟೋಲ್ಕೇಂದ್ರದ ಮುಂದೆ ಪ್ರತಿಭಟನೆ
- Wed, Dec 04 2019 09:42:13 AM
-
ಕುಂದಾಪುರ, ಡಿ 04 (Daijiworld News/MSP): ಯೋಜನಾ ವೆಚ್ಚ ತಯಾರಿಸದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಭೆಗಳಿಗೂ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳನ್ನು ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದವರು ತೆಗೆದುಕೊಂಡಿರುವ ನಿರ್ಧಾರಗಳು ಅವರು ವರ್ಗಾವಣೆಯಾಗುತ್ತಿದ್ದಂತೆ ಬದಲಾಗುತ್ತದೆ.
ಸುರತ್ಕಲ್ನಿಂದ ಕುಂದಾಪುರದವರೆಗೆ 26 ಕಡೆ ರಸ್ತೆ ಕ್ರಾಸ್ಗಳನ್ನು ಗುರುತಿಸಲಾಗಿದ್ದರೂ, ಎಲ್ಲಿ ಎನ್ನುವ ವಿವರಗಳು ಲಭ್ಯವಾಗುತ್ತಿಲ್ಲ. ಹೆದ್ದಾರಿ ನಿರ್ಮಾಣದಿಂದ ಆಗುತ್ತಿರುವ ಅವ್ಯವಸ್ಥೆಗಳಿಗೆ ಪರಿಹಾರ ದೊರಕಿಸಿಕೊಳ್ಳದೆ ಹೋದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸಲಿದೆ ಎಂದ ಅವರು ಕೇವಲ 10.5 ಕಿ.ಮೀ ದೂರದಲ್ಲಿ ೨ ಟೋಲ್ಗೇಟ್ ನಿರ್ಮಾಣವಾಗಿದ್ದರೂ, ನಮ್ಮ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ದಶಕದಿಂದ ನೆನೆಗುದಿಗೆ ಬಿದ್ದ ಕುಂದಾಪುರ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ವಿಳಂಬ ನೀತಿಯ ವಿರುದ್ಧ ಮಂಗಳವಾರ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಬಿ. ಕಿಶೋರ್ಕುಮಾರ, ಹೆದ್ದಾರಿ ವಿಸ್ತರಣೆಯ ಮೂಲ ಯೋಜನೆಯಲ್ಲಿ ಬಸ್ರೂರು ಮೂರು ಕೈ ಬಳಿ ಎಂಬ್ಯಾಕ್ಮೆಂಟ್, ಟಿ.ಟಿ ರಸ್ತೆ ಬಳಿಯಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡುವ ಯೋಜನೆಗಳೇ ಇರಲಿಲ್ಲ. ಗುತ್ತಿಗೆ ಕಂಪೆನಿಯ ಅನೂಕೂಲಕ್ಕಾಗಿ ಯೋಜನೆಗಳನ್ನು ಬದಲಾಯಿಸಲಾಗುತ್ತಿದೆ. ಜನರ ಸಹನೆಗಳೇ ಜನಪ್ರತಿನಿಧಿಗಳಿಗೆ ವರವಾಗುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗಾಗಿ ಹೋರಾಟ ನಡೆಸುವುದು ನಮ್ಮ ಹಕ್ಕು ಎನ್ನುವುದನ್ನು ಪ್ರತಿಪಾದನೆ ಮಾಡುವುದನ್ನೆ ಜನರು ಮರೆಯುತ್ತಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ವಿಸ್ತರಣೆಯ ಮೂಲ ಯೋಜನೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ಬಳಿಯಲ್ಲಿ ರಸ್ತೆಗೆ ಎಂಬ್ಯಾಕ್ಮೆಂಟ್ ನಿರ್ಮಾಣ ಮಾಡಿ ಸಣ್ಣ ಪ್ರಮಾಣದ ಅಂಡರ್ಪಾಸ್ ನಿರ್ಮಾಣ ಮಾಡುವ ಉದ್ದೇಶ ಇತ್ತು. ಸ್ಥಳೀಯರ ಒತ್ತಾಯದಂತೆ ಕೇಂದ್ರ ಸರ್ಕಾರದ ಗಮನ ಸೆಳೆದು ಫ್ಲೈ ಓವರ್ನಿರ್ಮಾಣದ ಪ್ರಾಸ್ತಾವನೆಗೆ ಒಪ್ಪಿಗೆ ಪಡೆಯಲಾಗಿತ್ತು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರತಾಪ್ಶೆಟ್ಟಿ, ಕಾಮಗಾರಿಯನ್ನು ಮುಂದಿನ ೬ ತಿಂಗಳ ಒಳಗೆ ಮುಗಿಸುತ್ತೇವೆ ಎನ್ನುವ ಗುತ್ತಿಗೆದಾರ ಕಂಪೆನಿಯ ವಾಯಿದೆಯೇ ಮುಗಿದಿದೆ. ಪ್ರಸ್ತುತ ನೀಡಿರುವ ವಾಯಿದೆಯೊಳಗೆ ಕಾಮಗಾರಿ ಮುಗಿಯದೆ ಇದ್ದಲ್ಲಿ ಟೋಲ್ ಬಂದ್ ಮಾಡುವ ಜಿಲ್ಲಾಡಳಿತದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು.
ವಕೀಲ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಅವರು ಪ್ರಾಣ ಹಾನಿ ಹಾಗೂ ಸ್ವತ್ತು ಹಾನಿ ನಿಯಂತ್ರಣ ಮಾಡುವ ಉದ್ದೇಶಕ್ಕಾಗಿ ರೂಪಿಸಲಾದ ಚತುಷ್ಪಥ ಯೋಜನೆಯ ಮೂಲ ಉದ್ದೇಶಗಳೇ ಮರೆಯಾಗುತ್ತಿದೆ. ಸುಂಕ ಕೊಟ್ಟು ಸಂಕಷ್ಟ ಪಡೆದುಕೊಳ್ಳಲಾಗುತ್ತಿದೆ. ಹೆದ್ದಾರಿ ವಿಸ್ತರಣೆಯಾದ ಬಳಿಕ ಜೀವ ಹಾನಿ ಹಾಗೂ ಸ್ವತ್ತು ಹಾನಿ ಹೆಚ್ಚಾಗುತ್ತಿದೆ. ನಿಯಮಕ್ಕೆ ವಿರುದ್ಧವಾಗಿ ಬ್ಯಾರಿಕೇಡ್ಗಳನ್ನು ಹಾಕಲಾಗುತ್ತಿದೆ. ಹೆದ್ದಾರಿಯಲ್ಲಿ ಸಮರ್ಪಕವಾದ ದಾರಿದೀಪದ ವ್ಯವಸ್ಥೆ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಖಾರವಾಗಿ ಹೇಳಿದರು.
ಸಿಪಿಎಂ ಪಕ್ಷದ ಹಿರಿಯ ಮುಖಂಡರಾದ ಎಚ್.ನರಸಿಂಹ, ವೆಂಕಟೇಶ ಕೋಣಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಹಿರಿಯ ವಕೀಲ ಎ.ಎಸ್.ಎನ್ಹೆಬ್ಬಾರ್, ಸಾಸ್ತಾನ ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ಸುಂದರ್ಎನ್ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ ಗುತ್ತಿಗೆ ಕಂಪನೆ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಜನರು ಸ್ವಷ್ಟ ನಿರ್ಧಾರ ಪ್ರಕಟಿಸುವ ವರೆಗೂ ತೆರಳಲು ಬಿಡುವುದಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಶೋ ಮಾಡುವುದು ಸರಿಯಲ್ಲ ಎಂದು ಅಸಹನೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸಭೆಯ ಕೊನೆಯ ಹಂತದ ವೇಳೆಯಲ್ಲಿ ಅಧಿಕಾರಿಗಳು ನೀಡಿದ ಭರವಸೆಗಳಿಗೆ ತೃಪ್ತರಾಗದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 66 ರನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾದದರು. ಏಕಾಏಕಿ ನಡೆದ ಬೆಳವಣಿಗೆಯಿಂದ ಒಂದು ಕ್ಷಣ ವಿಚಿಲಿತರಾದ ಪೊಲೀಸ್ಅಧಿಕಾರಿಗಳು ಅವರ ಮನವೂಲಿಕೆಗೆ ಮುಂದಾದರು. ಸರ್ಕಲ್ ಇನ್ಸ್ಪೆಕ್ಟರ್ಮಂಜಪ್ಪ ಡಿ.ಆರ್ಹಾಗೂ ಎಸ್.ಐ ಹರೀಶ್ನಾಯ್ಕ್ ಅವರ ಮನವೂಲಿಕೆಯಿಂದಾಗಿ ಹೆದ್ದಾರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಅಹವಾಲು ಆಲಿಸಿದ ಎ.ಸಿ
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಕೆ.ರಾಜೂ ಅವರು ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದ ಬಳಿಕ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆಯನ್ನು ಯಾವಾಗ ಮುಗಿಸುತ್ತೀರಿ ಎನ್ನುವ ಸ್ವಷ್ಟ ಭರವಸೆ ನೀಡುವಂತೆ ಸೂಚಿಸಿದರು. ಪ್ರತಿಸ್ಪಂದಿಸಿದ ಅಧಿಕಾರಿಗಳು ಮಾ.೩೧ ರ ಒಳಗೆ ಮುಗಿಸುವ ಭರವಸೆ ನೀಡಿದರು.ನಿಗದಿತ ದಿನಾಂಕದ ಒಳಗೆ ಕಾಮಗಾರಿ ಪೂರ್ಣಗೊಳ್ಳದೆ ಹೋದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಾ.31 ರಿಂದ ಟೋಲ್ ಸಂಗ್ರಹ ಬಂದ್ಮಾಡಲಾಗುತ್ತದೆ. ಎ.ಸಿ ಕೋರ್ಟ್ರ್ಟ್ರ್ಟ್ನಲ್ಲಿ 133 ಕಾನೂನು ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲಾಗುತ್ತದೆ. ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಸಂಬಂಧಿತರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಉಪವಿಭಾಗಾಧಿಕಾರಿ ಹೇಳಿದರು.
ಸೋಮಶೇಖರ ಶೆಟ್ಟಿ ಕೆಂಚನೂರು, ಬಿ.ಕಿಶೋರಕುಮಾರ, ರಾಜೇಶ್ಕಾವೇರಿ, ಶಶಿಧರ ಹೆಮ್ಮಾಡಿ, ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್ಮೆಂಡನ್ಎಲ್ಐಸಿ ರಸ್ತೆ, ನ್ಯಾಯವಾದಿಗಳಾದ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಮಲ್ಯಾಡಿ ಜಯರಾಮ್ಶೆಟ್ಟಿ, ಕೆ.ಸಿ.ಶೆಟ್ಟಿ ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಪುರಸಭೆಗೆ ಆಯ್ಕೆಯಾದ ದೇವಕಿ ಪಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ.ಗಿರೀಶ್, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ, ಶ್ರೀಧರ , ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ವಿಠ್ಠಲ್ಪೂಜಾರಿ ಸಾಸ್ತಾನ, ಪ್ರಶಾಂತ ಶೆಟ್ಟಿ ಸಾಸ್ತಾನ, ರಾಜೇಶ್ಕೆ.ವಿ ಪಾಂಡೇಶ್ವರ, ಟ್ರೋಲ್ಕುಂದಾಪುರ ಕುಡಿ ಸಾಮಾಜಿಕ ಜಾಲ ತಾಣದ ವೈಭವ್, ಶಾಶ್ವತ್ಶೆಟ್ಟಿ, ಅನಿಲ್ಇದ್ದರು.