ಕುಂದಾಪುರ, ಡಿ 03 (Daijiworld News/MSP): ಹೊಳೆಯಲ್ಲಿ ಆಮೆ ಮತ್ತು ಕೂರ್ಮಾಗಳನ್ನು ಹಿಡಿದು ಹತ್ಯೆ ಮಾಡುತ್ತಿದ್ದ ಸಂದರ್ಭ ವನ್ಯ ಜೀವಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಆಮೆ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ತಡ ರಾತ್ರಿ ಆಲೂರು ಗ್ರಾಮದ ಕಳಿ ಎಂಬಲ್ಲಿ ನಡೆದಿದೆ.
ಬಂಧಿತ ಮೂವರು ಆರೋಪಿಗಳನ್ನು ಕೊಲ್ಲೂರಿನ ನಿವಾಸಿ ಶೀನ ಕೊರಗ(38), ಚಂದ್ರ ಕೊರಗ(38), ಗಣೇಶ್ ಕಲ್ಯಾಣಿಗುಡ್ಡೆ ಎಂದು ಗುರುತಿಸಲಾಗಿದೆ. ಆಮೆಯು ಶೆಡ್ಯೂಲ್ 1 ಭಾಗ 2ರ ಪ್ರಕಾರ ಹೆಚ್ಚಿನ ಸಂರಕ್ಷಣೆಯಲ್ಲಿರಬೇಕಾದ ಪ್ರಾಣಿಯಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಲಯ ಅರಣ್ಯಾಧಿಕಾರಿ ರಾಘವೇಮದ್ರ ಗಣಪತಿ ನಾಯ್ಕ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದಯಾನಂದ, ಸಿದ್ಧೇಶ್ವರ ಕುಂಬಾರ, ದೇವಿ ಪ್ರಸಾದ್, ಅರಣ್ಯ ರಕ್ಷಕರಾದ ವಿವೇಕ್, ಇಡೂರು ಕಳ್ಳಬೇಟು ತಡೆ ಶಿಬಿರದ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.