ಕಾರ್ಕಳ, ಡಿ 03 (Daijiworld News/MSP): ಮೈಕ್ರೋ ಫೈನಾನ್ಸ್ನಿಂದ ನಡೆಯುತ್ತಿರುವ ದುಬಾರಿ ಬಡ್ಡಿ, ಬಲವಂತ ಸಾಲ ವಸೂಲಿ, ನಿಯಮಾವಳಿ ಬಾಹಿರವಾಗಿ ನೀಡಿದ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಋಣಮುಕ್ತಕ್ಕಾಗಿ ಹೋರಾಟ ಸಮಿತಿ ವತಿಯಿಂದ ಕಾರ್ಕಳ ಬಂಡೀಮಠ ಬಸ್ ನಿಲ್ದಾಣ ಪರಿಸರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಸಭೆಯ ನೇತೃತ್ವವನ್ನು ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ವಕೀಲ ಬಿ.ಎಮ್.ಭಟ್ ವಹಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಉದ್ಧೇಶವನ್ನೇ ತಿರುಚಿ ಮಹಿಳೆಯರನ್ನ ಸಾಲದ ಸುಳಿಗೆ ಸಿಲುಕಿಸಿದ ಮೈಕ್ರೋ ಫೈನಾನ್ಸ್ ಸ್ತಂಭನಗೊಳಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿಲಾಯಿತು. ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕೈಗಾರಿಕೆಗಳ ನಾಶ, ಉದ್ಯೋಗ ನಾಶ ಮೊದಲಾದ ಸಮಸ್ಸೆಗಳಿಂದ ದೇಶ ಬಳಲುತ್ತಿದೆ. ಜಿ.ಎಸ್.ಟಿ ಯಿಂದ ವಾರಪೂರ್ತಿ ಬೀಡಿ ಕೆಲಸವೂ ಇಲ್ಲದಾಗಿದೆ. ಇಂತಹ ಸಮ,ಯದಲ್ಲಿ ಬಡಜನರ ಮನೆ ಮನೆಗೆ ಬಂದು ಮೈಕ್ರೋ ಫೈನಾನ್ಸ್ಗಳು ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಾ ಕೆಲಸವಿಲ್ಲದೇ ಸಾಲ ಕಟ್ಟಲಾಗದೇ ಮಹಿಳೆಯರ ಮೇಲೆ ದಬ್ಬಾಳಿಕೆ ಮಿತಿ ಮೀರಿದೆ. ಆತ್ಮಹತ್ಯೆ ಪ್ರಕರಣ ನಡೆದಿದೆ ಎಂದು ಆರೋಪಿದರು.
ಸಣ್ಣ ಹಣಕಾಸು ವ್ಯವಹಾರ ನಡೆಸಲು ಅನುಮತಿ ಪಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅತೀ ದೊಡ್ಡ ಹಣಕಾಸು ವ್ಯವಹಾರ ನಡೆಸುತ್ತಾ ಇಂದು ಭಾರತ ಆರ್ಥಿಕತೆ ಕುಸಿತಕ್ಕೂ ಕಾರಣವಾಗಿದೆ. ಮೈಕ್ರೋ ಫೈನಾನ್ಸ್ ನಿಯಮ ಪ್ರಕಾರ ಬಡತನ ನಿವಾರಣೆಗೆ ಶ್ರಮಿಸಬೇಕು. ಸ್ವ-ಉದ್ಯೋಗ ಕಲ್ಪಿಸುವುಲ್ಲದೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಸಾಧ್ಯವಾಗಬೇಕು. ಮೈಕ್ರೋ ಫೈನಾನ್ಸ್ಗಳಿಗೆ ಆರ್ಬಿಐ ಅನುಮತಿ ನೀಡಿರುವುದೇ ಬ್ಯಾಂಕೇತರ, ಠೇವಣಿ ರಹಿತ ಸಣ್ಣ-ಹಣಕಾಸು ಸಂಸ್ಥೆಗಳನ್ನು ನಡೆಸಿ ಜನರ ಅಭಿವೃದ್ಧಿಗೆ ದುಡಿಯಲಿಕ್ಕಾಗಿದೆ. ನಬಾರ್ಡ್ ಬ್ಯಾಂಕಿನಿಂದ ಶೇ.೪ಬಡ್ಡಿಗೆ ಸಾಲ ಪಡೆಯವ ಈ ಫೈನಾನ್ಸ್ಗಳು ತಮ್ಮ ಸರಕಾರ ಲೆಕ್ಕಕ್ಕೆ ತೋರಿಸದ ಕೋಟ್ಯಾಂತರ ಹಣವನ್ನು ಬಡ್ಡಿ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ ಎಂದರು.
ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೈಲೂರು ಅಧ್ಯಕ್ಷತೆ ವಹಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಉಪಪ್ರಧಾನ ಸಂಚಾಲಕ ರಮೇಶ್ ಬಿ.ಪೆರ್ವಾಜೆ, ಋಣಮುಕ್ತಕ್ಕಾಗಿ ಹೋರಾಟ ಸಮಿತಿ ಮೂಡಬಿದ್ರೆ ಅಧ್ಯಕ್ಷರು ವಿನೋದ ಮುದ್ರಾಡಿ, ಮುಲ್ಕಿ ಘಟಕದ ನವೀನ್ ಪುತ್ರಾನ್, ಕಾಪು ಘಟಕದ ಮಮತಾ ಆರ್. ಉಡುಪಿ ಘಟಕದ ಜಯಂತಿ ಕರ್ಕೇರಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.