ಕಾಸರಗೋಡು, ಡಿ 2 (DaijiworldNews/SM): ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಾಸರಗೋಡಿನ ಅಂಬಲತ್ತರ ಇರಿಯ ಎಂಬಲ್ಲಿ ಡಿಸೆಂಬರ್ 2ರ ಸೋಮವಾರ ಸಂಜೆ ನಡೆದಿದೆ. ಕಲ್ಯಾಣಿ(50) ಹತ್ಯೆಗೀಡಾದ ಮಹಿಳೆ. ಈಕೆಯ ಪತಿ ಗೋಪಾಲಕೃಷ್ಣ(60) ಹತ್ಯೆಗೈದ ಆರೋಪಿ.
ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ಪತಿ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ಸೌದೆಯಿಂದ ಪತಿ, ಪತ್ನಿಯ ತಲೆಗೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಆತನ ಮಗಳು ತಡೆಯಲು ಬಂದಿದ್ದಳು. ಆಕೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಂಬಲತ್ತರ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.