ಬಂಟ್ವಾಳ, ಡಿ 1 (Daijiworld News/MB) : ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಎಂಬವರ ಮೇಲೆ ನಡೆಸಿದ ಹಲ್ಲೆ ಕುಕ್ಕಾಜೆ ಮೊಯಿನುದ್ದಿನ್ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯವರೊಂದಿಗೆ ಇದ್ದ ಮನಸ್ತಾಪ ಕಾರಣವಾಗಿರಬಹುದೆಂದು ಅಬ್ದುಲ್ ರಝಾಕ್ ರವರು ದೂರಿದ್ದಾರೆ.
ರಝಾಕ್ ಅವರ ಮೇಲೆ ಬಂಟ್ವಾಳ ಮಂಚಿ ನಿವಾಸಿ ಗಳಾದ ಬಶೀರ್, ಕಭೀರ್ ಮತ್ತು ಸಿಧ್ದೀಕ್ ಎಂಬವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ, ಮಂಚಿ ಗ್ರಾಮದ ಮಂಚಿ ಕಟ್ಟೆಯಲ್ಲಿರುವ ಕ್ಲಿನಿಕ್'ವೊಂದಕ್ಕೆ ನವೆಂಬರ್ 30ರ ಶನಿವಾರ ರಾತ್ರಿ ತೆರಳಿದ್ದು ಈ ವೇಳೆ ಬೈಕ್'ನಲ್ಲಿ ಬಂದ ತಂಡ ಏಕಾಏಕಿ ರಝಾಕ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.