ಉಳ್ಳಾಲ, ನ 29 (DaijiworldNews/SM): ದುಷ್ಕರ್ಮಿಗಳ ತಂಡವೊಂದು ಯುವಕನೋರ್ವ ಮೇಲೆ ಮನಬಂದಂತೆ ತಲ್ವಾರ್ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನವಂಬರ್ 29ರ ಶುಕ್ರವಾರ ತಡರಾತ್ರಿ ನಡೆದಿದೆ. ಕಾಸರಗೋಡು ಮೂಲದ ಸುದರ್ಶನ್(20) ಹತ್ಯೆಯಾದವರು.
ಯುವಕ ಸುದರ್ಶನ್ ನನ್ನು ಹತ್ಯೆ ನಡೆಸಿದ ಬಳಿಕ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ತೊಕ್ಕೊಟ್ಟು ನಿವಾಸಿ ಡಿ.ಕೆ. ರಕ್ಷಿತ್ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತಡರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳ ತಂಡ ಸುದರ್ಶನ್ ಶವವನ್ನು ಕಾಪಿಕಾಡು ಬಳಿಯಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.