ಮೂಡುಬಿದಿರೆ, ನ 29 (Daijiworld News/MSP): ಮೂಡಬಿದಿರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಜಿನಿಯರಿಂಗ್ ಕಾಲೇಜಿನ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ತಡೆಯೊಡ್ಡಿದ್ದು, ಇದರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
" ಒಂದು ವರ್ಷಗಳ ಕಾಲ ಪರೀಕ್ಷೆ ಬರೆಯಲು ಬಿಡದೆ , ಆಡಳಿತ ಮಂಡಳಿಯು ನಮ್ಮ ಅಹವಾಲು ವಿಚಾರಿಸದೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಡಿಟೈನ್ ಆದ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಹಾಜರಿ ಕೊರತೆ ಎಂದು ನೆಪದಲ್ಲಿ ಪರೀಕ್ಷೆ ಬರೆಯಲು ತಡೆಯೊಡ್ಡಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
15ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಟೈನ್ ಆಗಿದ್ದು, ಆನಾರೋಗ್ಯ, ಅಪಘಾತ, ಚಿಕಿತ್ಸೆಯ ಡಾಕ್ಯೂಮೆಂಟ್ಗಳು ಇದ್ದರೂ, ಅದನ್ನೆಲ್ಲಾ ಲೆಕ್ಕಿಸದೇ ಕಾಲೇಜಿನ ಈ ನಿರ್ಧಾರ ನಮ್ಮನ್ನು ಶೂನ್ಯರನ್ನಾಗಿಸಿದೆ. ಪೋಷಕರು ಸಮೇತ ವಿದ್ಯಾರ್ಥಿಗಳು ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.