ಉಡುಪಿ, ನ 28 (DaijiworldNews/SM): ಒಂದು ವೇಳೆ ಮುಸ್ಲಿಂರಿಗೆ ಅಯೋಧ್ಯಯಲ್ಲಿ ಮಂದಿರ ಕಟ್ಟಲು ಜಾಗ ಕೊಟ್ಟರೆ, ಅಥವಾ ರಾಮ ಮಂದಿರದ ಪಕ್ಕಾ ಶಿಕ್ಷಣ ಕೇಂದ್ರ ಮದ್ರಸ ಕಟ್ಟಲು ಅವಕಾಶ ಕೊಟ್ಟರೆ, ಶಾಂತಿ ಸಾಮರಸ್ಯದ ಹೆಸರಲ್ಲಿ, ಅಯೋಧ್ಯೆಯ ಹೊರಗೆ ಇನ್ನೊಂದು ಪಾಕಿಸ್ತಾನ ಆರಂಭಕ್ಕೆ ಅಭಿಯಾನ ಶುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ, ಎಂದು ಶ್ರೀ ಪುರಿ ಗೋವರ್ಧನ ಫೀಠದ ಶ್ರೀ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುವಾರದಂದು ಮಾದ್ಯಮದವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಜನ್ಮಭೂಮಿ ಬಾಬರಿ ಮಸೀದಿ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಿದಲ್ಲಿ ನಮ್ಮ ದೇಶದಲ್ಲಿ ಇನ್ನೊಂದು ಮೆಕ್ಕಾ ನಿರ್ಮಾಣವಾಗುತ್ತದೆ. ಈ ರೀತಿಯ ತೀರ್ಪು ಹೊರಬೀಳಲು ಪ್ರಧಾನಿ ಮೋದಿ ಕುಮ್ಮಕ್ಕು ಇದೆಯೇ ಎಂಬ ಸಂಶಯ ಇದೆ ಎಂದು ಪುರಿ ಸ್ವಾಮೀಜಿಗಳು ಹೇಳಿದರು.
ಹಿಂದುಗಳ ಅಸ್ತಿತ್ವದ ಮತ್ತು ಆದರ್ಶದ ರಕ್ಷಣೆ, ದೇಶದ ಸುರಕ್ಷೆ, ಅಖಂಡತೆ ನನ್ನ ಪ್ರವಾಸದ ಮುಖ್ಯ ಉದ್ದೇಶ, ಸುಸಂಕೃತ, ಸುಶಿಕ್ಷಿತ ಸುರಕ್ಷಿತ ಸಮಾಜದ ರಚನೆಯ ಧ್ಯೇಯವನ್ನಿಟ್ಟು ಕೊಂಡು ದಕ್ಷಿಣ ಭಾರತದ ಪ್ರವಾಸ ಹೊರಟಿದ್ದಾರೆ. ಅಯೋಧ್ಯ ತೀರ್ಪಿನ ಬಗ್ಗೆ ಅರಿವು ಇರಬೇಕಾಗುತ್ತದೆ. ಈ ಭೂಮಿಯಲ್ಲಿ ಮಾನವ ಮಂಡಲ ಅಸ್ತಿತ್ವಕ್ಕೆ ಬಂದ ನಂತರ ಮೊದಲು ಹುಟ್ಟಿದ ರಾಜಧಾನಿ ಎಂದರೆ ಅಯೋದ್ಯ. ಇಕ್ಷ್ವಾಕು ವಂಶಸ್ಥ ಮನು ಚಕ್ರವರ್ತಿ ನಿರ್ಮಿತ ಅಯೋಧ್ಯೆ. ಅದರ ಜಾಗ ಸಿಗುವವರೆಗೆ ವಕೀಲರಿಗೆ ವಾದ ಮಂಡಿಸುವ ಪರಿಧಿ ಮಾತ್ರ ಇತ್ತು. ಪುರಿಯ ಪರಿಧಿಯಲ್ಲಿ ಅಯೋಧ್ಯ ಕೂಡ ಬರುತ್ತದೆ. ಶಂಕರಾಚಾರ್ಯರು ಸ್ಥಾಪಿಸಿದ ಆಮ್ನಾಯಪೀಠಗಳಲ್ಲೊಂದಾದ ಪುರಿ ಜಗನ್ನಾಥ ಪೀಠ ವ್ಯಾಪ್ತಿಗೆ ಅಯೋಧ್ಯೆ ಒಳಪಡಲಿದೆ. ಪುರಿಪೀಠಕ್ಕೆ ನ್ಯಾಯಪ್ರದಾನದ ಅಧಿಕಾರವಿದೆ. ಇಲ್ಲಿನ ಪೀಠಾಧೀಶರ ಅನಿಸಿಕೆಯನ್ನೂ ಮಾನ್ಯಮಾಡಬೇಕು ಎಂದವರು ಆಗ್ರಹಿಸಿದರು.
ಭಾರತದ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ 940 ಎಕರೆ ವಿಸ್ತೀರ್ಣ ಹೊಂದಿದೆ. ದೇಶವೊಂದರ ಪ್ರಥಮ ಪ್ರಜೆಯ ಭವನವೇ ಇಷ್ಟೊಂದು ವಿಸ್ತಾರ ಹೊಂದಿರುವಾಗ ಜಗತ್ಪ್ರಭುವಾದ ಅಯೋಧ್ಯಾಪತಿ ಶ್ರೀರಾಮಚಂದ್ರನ ಭವ್ಯ ದೇಗುಲ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕಿಂತ ಕಡಿಮೆ ವಿಸ್ತಾರ ಹೊಂದಕೂಡದು ಎಂದು ಪೂರ್ವಾಮ್ನಾಯ ಪುರಿ ಜಗನ್ನಾಥ ಪೀಠದ ಪರಮಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಈ ಹಿಂದೆ ಪಿ.ವಿ. ನರಸಿಂಹ ರಾವ್ ಸರಕಾರವಿದ್ದಾಗ ಇಂತದ್ದೇ ರಾಜಿ ಪತ್ರಕ್ಕೆ ನಾನು ಸಹಿ ಹಾಕಿರಲಿಲ್ಲ. ಒಂದು ವೇಳೆ ಹಾಕಿದ್ದರೆ ಇಂದು ಆಗುವುದು ಅಂದೇ ಆಗುತ್ತಿತ್ತು. ಮೂರು ಮುಸ್ಲಿಂ ನಾಯಕರನ್ನು ಈ ದೇಶದ ಪ್ರತಿಷ್ಠಿತ ಹುದ್ದೆಗೆ ನೇಮಕ ಮಾಡಿದೆ. ಈ ಹಿಂದೆ ಅನೇಕರು ನಮ್ಮ ದೇಶವನ್ನು ಆಳಿದ್ದಾರೆ. ನಮ್ಮ ಭಾರತೀಯರ ಔದಾರ್ಯತೆಯನ್ನು ದುರುಪಯೋಗ ಪಡಿಸಬಾರದು, ಎಂದು ಪುರಿ ಸ್ವಾಮೀಜಿಗಳು ಹೇಳಿದರು.