ಪುತ್ತೂರು, ನ 28(Daijiworld News/MB) : ಪುತ್ತೂರಿನ ಐದನೇ ಸತ್ರ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಯಾದ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಶಂಭುಗ ನಿವಾಸಿ ರಾಜೇಶ್ ಪೂಜಾರಿಗೆ ಶಿಕ್ಷೆ ವಿಧಿಸಿದೆ.
ರಾಜೇಶ್ ಪೂಜಾರಿ 5 ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಕೆಲಸ ಕೊಡಿಸುವ ಮತ್ತು ಉಡುಗೆ ತೆಗೆಸಿಕೊಡುವ ಆಮಿಷವೊಡ್ಡಿ ಬೆಂಗಳೂರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ನಯ ಎಸಗಿದ ಕುರಿತು ಪ್ರಕರಣ ದಾಖಲಾಗಿತ್ತು.
ಆರೋಪಿಗೆ ಭಾರತೀಯ ದಂಡಸಂಹಿತೆ ಕಲಂ 363 ರ ಪ್ರಕಾರ 3 ವರ್ಷಗಳ ಸಾದಾ ಶಿಕ್ಷೆ ಮತ್ತು 5000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳುಗಳ ಸಾದಾ ಶಿಕ್ಷೆ, ಕಲಂ 366ರ ಪ್ರಕಾರ 5 ವರ್ಷಗಳ ಸಾದಾ ಶಿಕ್ಷೆ ಮತ್ತು 8000 ರೂಪಾಯಿ ದಂಡ, ದಂಡ ತೆರಲು ತಪ್ಪಿದ್ದಲ್ಲಿ 4 ತಿಂಗಳುಗಳ ಸಾದಾ ಶಿಕ್ಷೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ರಕ್ಷಣೆ ಕಾಯ್ದೆಯಡಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ, ಕಲಂ 376ರ 5(1)(6)ರಡಿ 1 ವರ್ಷ ಸಾದಾ ಸಜೆ, ಕಲಂ 323 ರಡಿ 2 ತಿಂಗಳ ಸಾದಾ ಸಜೆ ಮತ್ತು 500 ರೂಪಾಯಿ ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಶಿಕ್ಷೆ ವಿಧಿಸಲಾಗಿದ್ದು, ದಂಡದ ಮುತ್ತದಲ್ಲಿ 30 ಸಾವಿರ ರೂಪಾಯಿಯನ್ನು ಸಂತ್ರಸ್ತೆ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಲು ತೀರ್ಪಿನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ಸಂತ್ರಸ್ತೆಯು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಅಂದಿನ ನಗರ ಪೊಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲು ಮಾಡಿದ್ದರು. ದೋಷಾರೋಪ ಪಟ್ಟಿಯನ್ನು ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಕೆ.ಮಂಜಪ್ಪ ಸಲ್ಲಿಸಿದ್ದರು. ಅಭಿಯೋಜನೆ ಪರವಾಗಿದ್ದ 25 ಸಾಕ್ಷಿಗಳ ಪೈಕಿ 18 ಸಾಕ್ಷಿಗಳ ವಿಚಾರಣೆ ಮಾಡಲಾಗಿತ್ತು. ಬಾಲಕಿ ಪರ ವಿಶೇಷ ಸರಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ಅವರು ವಾದಿಸಿದರು.